alex Certify ಮದುವೆಯಾದ ಎರಡೇ ದಿನಕ್ಕೆ ಮಗು ಜನನ ; ವಧುವಿನ ʼರಹಸ್ಯʼ ತಿಳಿದು ವರ ಕಂಗಾಲು ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಎರಡೇ ದಿನಕ್ಕೆ ಮಗು ಜನನ ; ವಧುವಿನ ʼರಹಸ್ಯʼ ತಿಳಿದು ವರ ಕಂಗಾಲು !

ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ನಡೆದ ವಿವಾಹವೊಂದು ಅಚ್ಚರಿಯ ತಿರುವು ಪಡೆದುಕೊಂಡಿದೆ. ನವವಿವಾಹಿತ ವಧು ಮದುವೆಯಾದ ಎರಡೇ ದಿನಕ್ಕೆ ಮಗುವಿಗೆ ಜನ್ಮ ನೀಡಿದ್ದು, ಈ ಘಟನೆ ವರನ ಕುಟುಂಬಕ್ಕೆ ಆಘಾತ ತಂದಿದೆ. ವಿವಾಹವು ಅದ್ದೂರಿಯಾಗಿ ನಡೆದಿದ್ದು, ನವವಿವಾಹಿತರು ಎರಡು ದಿನ ಒಟ್ಟಿಗೆ ಕಳೆದಿದ್ದರು. ಆದರೆ, ಎರಡನೇ ದಿನ ವಧು ಇದ್ದಕ್ಕಿದ್ದಂತೆ ಆಸ್ಪತ್ರೆಗೆ ಹೋಗಿ ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದರೂ, ಸಂಭ್ರಮದ ಬದಲು ಕುಟುಂಬವು ಸಂಕಷ್ಟಕ್ಕೆ ಸಿಲುಕಿದೆ.

ಫೆಬ್ರವರಿ 24 ರಂದು, ಯುವಕನ ವಿವಾಹದ ಮೆರವಣಿಗೆ ಜಸ್ರಾ ಗ್ರಾಮಕ್ಕೆ ಆಗಮಿಸಿತು. ವಧುವಿನ ಕುಟುಂಬವು ವರನನ್ನು ಉತ್ಸಾಹದಿಂದ ಸ್ವಾಗತಿಸಿದ್ದು, ವಿವಾಹವು ಅದ್ದೂರಿಯಾಗಿ ನಡೆಯಿತು. ವಧು ಮತ್ತು ವರ ಮಾಲೆ ಬದಲಾಯಿಸಿಕೊಂಡಿದ್ದು, ರಾತ್ರಿಯವರೆಗೂ ಸಮಾರಂಭ ಮುಂದುವರೆಯಿತು. ಮರುದಿನ, ಫೆಬ್ರವರಿ 25 ರಂದು, ವಧುವನ್ನು ಆಕೆಯ ಅತ್ತೆಯ ಮನೆಗೆ ಕಳುಹಿಸಲಾಗಿದ್ದು, ಅವಳು ತನ್ನ ಹೊಸ ಮನೆಗೆ ಬಂದಾಗ, ಕುಟುಂಬವು ಸಂಭ್ರಮಿಸಿತ್ತು. ಅತಿಥಿಗಳು, ನೆರೆಹೊರೆಯವರು ಮತ್ತು ಸಂಬಂಧಿಕರು ಹೊಸ ವಧುವನ್ನು ನೋಡಲು ಸೇರಿದ್ದು, ದಿನವಿಡೀ ಸಾಂಪ್ರದಾಯಿಕ ಸಮಾರಂಭ ನಡೆದಿತ್ತು.

ಮರುದಿನ ಬೆಳಿಗ್ಗೆ, ಫೆಬ್ರವರಿ 26 ರಂದು, ವಧು ಬೇಗನೆ ಎದ್ದು ಕುಟುಂಬಕ್ಕೆ ಚಹಾ ನೀಡಿದ್ದು, ಹರ್ಷದ ವಾತಾವರಣ ನಿರ್ಮಿಸಿದ್ದಳು. ಆದರೆ, ಸಂಜೆಯ ವೇಳೆಗೆ, ಇದ್ದಕ್ಕಿದ್ದಂತೆ ನೋವಿನಿಂದ ಕಿರುಚಲು ಪ್ರಾರಂಭಿಸಿದ್ದು, ತೀವ್ರ ಹೊಟ್ಟೆ ನೋವಿನ ಬಗ್ಗೆ ಹೇಳಿಕೊಂಡಿದ್ದಾಳೆ. ಗಾಬರಿಗೊಂಡ ಕುಟುಂಬ ಅವಳನ್ನು ಕರ್ಚನಾ ಸಿಎಚ್‌ಸಿಗೆ ಕರೆದೊಯ್ಯಿತು. ಪರೀಕ್ಷೆಯ ನಂತರ, ವೈದ್ಯರು ಅವಳು ಗರ್ಭಿಣಿಯಾಗಿದ್ದಾಳೆ ಮತ್ತು ತಕ್ಷಣದ ಹೆರಿಗೆ ಅಗತ್ಯವಿದೆ ಎಂದಿದ್ದಾರೆ. ಆಘಾತಕ್ಕೊಳಗಾದ ಅತ್ತೆ-ಮಾವಂದಿರಿಗೆ ವೈದ್ಯಕೀಯ ಒಪ್ಪಿಗೆ ಪತ್ರಗಳಿಗೆ ಸಹಿ ಹಾಕಲು ಕೇಳಲಾಗಿದ್ದು, ಎರಡು ಗಂಟೆಗಳ ಒಳಗೆ, ವಧು ಮಗುವಿಗೆ ಜನ್ಮ ನೀಡಿದ್ದಾಳೆ.

ಈ ಸುದ್ದಿ ವರನ ಕುಟುಂಬದಲ್ಲಿ ಆಘಾತ ಮೂಡಿಸಿದ್ದು, ಗರ್ಭಧಾರಣೆಯ ವಿಷಯ ಮರೆಮಾಚಿದ್ದಕ್ಕಾಗಿ ಅತ್ತೆ-ಮಾವಂದಿರು ಕೋಪದಿಂದ ಸಿಡಿದೆದ್ದು, ವಧುವಿನ ಹೆತ್ತವರನ್ನು ದೂಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ವಧುವಿನ ಪೋಷಕರು ಕಳೆದ ವರ್ಷ ಮೇ ತಿಂಗಳಲ್ಲಿ ವಿವಾಹ ನಿಶ್ಚಯವಾಗಿತ್ತು ಮತ್ತು ಅಂದಿನಿಂದ ದಂಪತಿ ಸಂಪರ್ಕದಲ್ಲಿದ್ದರು ಎಂದು ಹೇಳಿದ್ದಾರೆ. ಆದರೆ, ವರ ಈ ಹೇಳಿಕೆಗಳನ್ನು ಸುಳ್ಳು ಎಂದು ತಳ್ಳಿಹಾಕಿ ತನಿಖೆಗೆ ಒತ್ತಾಯಿಸಿದ್ದಾನೆ. “ನನ್ನ ಮದುವೆ ನಾಲ್ಕು ತಿಂಗಳ ಹಿಂದೆ, ಅಕ್ಟೋಬರ್‌ನಲ್ಲಿ ನಿಶ್ಚಯವಾಗಿತ್ತು. ನಾನು ಈಗ ಈ ಹುಡುಗಿಯನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ಹೇಳಿದ್ದಾನೆ.

ಏತನ್ಮಧ್ಯೆ, ವಧುವಿನ ತಾಯಿ ವರನ ಕುಟುಂಬದವರು ವರದಕ್ಷಿಣೆ ತೆಗೆದುಕೊಂಡು ತನ್ನ ಮಗಳನ್ನು ತೊರೆದಿದ್ದಾರೆ ಎಂದು ಆರೋಪಿಸಿದರು. “ಅವರು ನನ್ನ ಮಗಳನ್ನು ಮರಳಿ ಕರೆದೊಯ್ಯಲು ನಿರಾಕರಿಸಿದರೆ, ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ. ನಾವೇ ಮಗುವನ್ನು ಬೆಳೆಸುತ್ತೇವೆ, ಆದರೆ ಅವಳು ಇನ್ನೂ ವರನ ಹೆಸರನ್ನು ತೆಗೆದುಕೊಳ್ಳುತ್ತಿದ್ದಾಳೆ. ಅವನು ಅವಳನ್ನು ಒಪ್ಪಿಕೊಳ್ಳದಿದ್ದರೆ, ಅವಳು ಸಾಯುತ್ತಾಳೆ” ಎಂದಿದ್ದಾರೆ. ಬಳಿಕ ವಿವಾದ ಗ್ರಾಮ ಪಂಚಾಯಿ ಮೆಟ್ಟಿಲೇರಿದ್ದು, ಅಲ್ಲಿ ಚರ್ಚೆ ನಡೆಸಿ ಅಂತಿಮವಾಗಿ, ವಧು ಮಗುವಿನೊಂದಿಗೆ ತವರಿಗೆ ಮರಳಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...