ಬೆಂಗಳೂರು : ಕುಡಿದ ಮತ್ತಿನಲ್ಲಿ ಪತಿಯೋರ್ವ ಪತ್ನಿಯನ್ನೇ ಹೊಡೆದು ಕೊಲೆ ಮಾಡಿದ ಘಟನೆ ಬೆಂಗಳೂರಿನ ಅನೇಕಲ್ ಜಿಲ್ಲೆಯ
ಗುಡ್ನಹಳ್ಳಿಯಲ್ಲಿ ನಡೆದಿದೆ.
ಪತಿ ಗೌರಿ ಎಂಬಾತ ಪತ್ನಿ ನೂಕಮ್ಮಳನ್ನು ಕೊಲೆ ಮಾಡಿದ್ದಾನೆ. ಒಡಿಶಾ ಮೂಲದ ದಂಪತಿಗಳು ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ದಿನನಿತ್ಯ ಕುಡಿದು ಬಂದು ಪತಿ ಗಲಾಟೆ ಮಾಡುತ್ತಿದ್ದನು. ಒಂದು ದಿನ ಗಲಾಟೆ ವಿಕೋಪಕ್ಕೆ ಹೋಗಿದ್ದು ರಾಡ್ ನಿಂದ ಪತ್ನಿ ನೂಕಮ್ಮ ತಲೆಗೆ ಹೊಡೆದು ನಂತರ ನೇಣು ಬಿಗಿದು ಕೊಲೆ ಮಾಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.