alex Certify BIG NEWS : ಕರ್ನಾಟಕದಲ್ಲಿ ಬಿಸಿಗಾಳಿ ಹೆಚ್ಚಳ : ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಕರ್ನಾಟಕದಲ್ಲಿ ಬಿಸಿಗಾಳಿ ಹೆಚ್ಚಳ : ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ.!

ಬೆಂಗಳೂರು : ಕರ್ನಾಟಕದಲ್ಲಿ ಬಿಸಿಗಾಳಿ ಹೆಚ್ಚಳ ಹಿನ್ನೆಲೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಬೇಸಿಗೆಯ ಸೆಕೆ ಜೊತೆ ಬಿಸಿಗಾಳಿ ಹೆಚ್ಚಳ ಹಿನ್ನೆಲೆ ಈ ಕ್ರಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಮಾರ್ಗಸೂಚಿ ನೀಡಿದೆ.

* ಪ್ರಯಾಣದ ಸಮಯದಲ್ಲಿ ಕುಡಿಯುವ ನೀರು ಜೊತೆಗೆ ಇರಬೇಕು.
* ನಿರ್ಜಲೀಕರಣ ಹೋಗಲಾಡಿಸಲು ಮನೆಯಲ್ಲೇ ಸಿದ್ದಪಡಿಸಿದ ನಿಂಬೆ ಹಣ್ಣಿನ ಜ್ಯೂಸ್, ಮಜ್ಜಿಗೆ, ಹಣ್ಣಿನ ಜ್ಯೂಸ್ ಗಳಿಗೆ ಒಂದು ಚಿಟಿಕೆ ಉಪ್ಪು ಮಿಕ್ಸ್ ಮಾಡಿ ಸೇವಿಸಬಹುದಾಗಿದೆ.
* ಹೆಚ್ಚು ನೀರಿನ ಅಂಶ ಹೊಂದಿರುವ ಹಣ್ಣುಗಳಾದ ಕಲ್ಲಂಗಡಿ, ಕಿತ್ತಳೆ, ದ್ರಾಕ್ಷಿ, ಅನಾನಸ್ , ಎಳನೀರು ಹಾಗೂ ಎಳೆಸೌತೆಕಾಯಿ ಸೇವಿಸುವುದು ಉತ್ತಮವಾಗಿದೆ. ಹಾಗೂ ತಿಳಿ ಬಣ್ಣದ , ಸಡಿಲವಾದ ಹತ್ತಿಯ ಬಟ್ಟೆ ಧರಿಸುವುದು ಉತ್ತಮವಾಗಿದೆ.

* ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಹೊರಗಡೆ ಹೆಚ್ಚು ಸುತ್ತಾಡಬೇಡಿ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

* ಸಾರ್ವಜನಿಕರು ಹಣ್ಣಿನ ಜ್ಯೂಸ್, ಹೆಚ್ಚು ನೀರು ಕುಡಿಯುವಂತೆ ಸಲಹೆ ನೀಡಲಾಗಿದೆ. ಹೊರಗಡೆ ಹೋಗುವಾಗ ಟೋಪಿ, ಛತ್ರಿ ಬಳಸಲು ಸಲಹೆ ನೀಡಲಾಗಿದೆ.

* ದೇಹವನ್ನು ನಿರ್ಜಲೀಕರಣಗೊಳಿಸುವ ಆಲೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ತಪ್ಪಿಸಿ.

* ಹೆಚ್ಚಿನ ಪ್ರೋಟೀನ್ ಆಹಾರವನ್ನು ತಪ್ಪಿಸಿ ಮತ್ತು ಹಳೆಯ ಆಹಾರವನ್ನು ಸೇವಿಸಬೇಡಿ.

* ನೀವು ಹೊರಗೆ ಕೆಲಸ ಮಾಡುತ್ತಿದ್ದರೆ ಟೋಪಿ ಅಥವಾ ಛತ್ರಿ ಬಳಸಿ ಮತ್ತು ನಿಮ್ಮ ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಿ.

* ಹೆಚ್ಚಿನ ಬಿಸಿಲು ಇರುವ ಅವಧಿಯಲ್ಲಿ ಶ್ರಮದಾಯಕ ದೈಹಿಕ ಕೆಲಸಗಳನ್ನು ಮಾಡಬೇಡಿ

* ಸಾಕಷ್ಟು ನೀರು ಮಜ್ಜಿಗೆ ಕುಡಿಯಿರಿ

* ಬಿಸಿ ಚಹ, ಮದ್ಯ ಸೇವಿಸಬೇಡಿ

* ವಾಸವಿರುವ ಕೋಣಿಯನ್ನು ತಂಪಾಗಿರಿಸಿ

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...