ಬೆಂಗಳೂರು : ವಿಧಾನಸೌಧದಲ್ಲಿ ಸರ್ಕಾರ ಪುಸ್ತಕ ಮೇಳ ಆಯೋಜಿಸಿದ್ದು, ಸಾಹಿತ್ಯಾಸಕ್ತರ ದಂಡೇ ಹರಿದು ಬಂದಿದೆ.
ನಮ್ಮ ಸಾಹಿತ್ಯದ ಅಭಿರುಚಿಯನ್ನು ಹುಟ್ಟು ಹಾಕಬೇಕು ಎಂಬ ಸದುದ್ದೇಶದಿಂದ ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ಅವರು ಪ್ರಪ್ರಥಮ ಬಾರಿಗೆ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿದ್ದಾರೆ. ಫೆಬ್ರವರಿ 27ರಂದು ಸಿಎಂ ಸಿದ್ದರಾಮಯ್ಯ & ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅವರಿಂದ ಉದ್ಘಾಟನೆಗೊಂಡ ಈ ಪುಸ್ತಕ ಮೇಳಕ್ಕೆ ಸಾಹಿತ್ಯಾಸಕ್ತರ ದಂಡೇ ಹರಿದು ಬರುತ್ತಿದೆ. ಈ ಸಾಹಿತ್ಯ ಜಾತ್ರೆಯಲ್ಲಿ 250 ಪುಸ್ತಕ ಮಾರಾಟ ಮಳಿಗೆಗಳು, ನೂರಾರು ಸಾಹಿತಿಗಳ ಸಾವಿರಾರು ಪುಸ್ತಕಗಳು ಲಭ್ಯವಿದೆ. ಈ ವಿಭಿನ್ನ ಪ್ರಯತ್ನದ ಬಗ್ಗೆ ಸಾರ್ವಜನಿಕರು, ಲೇಖಕರು, ಓದುಗರು, ಪ್ರಕಾಶಕರು ಏನ್ ಹೇಳ್ತಾರೆ ಅನ್ನೋದನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.