ಮಡಿಕೇರಿ : ಕೊಡಗು ಜಿಲ್ಲಾ ಗೃಹರಕ್ಷಕದಳದ ಗೌರವ ಸಮಾದೇಷ್ಟರ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೊಡಗು ಜಿಲ್ಲೆಯ ಗೃಹ ರಕ್ಷಕದಳದ ಗೌರವ ಸಮಾದೇಷ್ಟರ ಹುದ್ದೆಯು ಖಾಲಿ ಇದ್ದು ತುರ್ತಾಗಿ ಅರ್ಹರನ್ನು ಅರ್ಹತೆಯ ಮೇರೆಗೆ ಸರ್ಕಾರದ ಮಟ್ಟದಲ್ಲಿ ಆಯ್ಕೆ ಮಾಡಬೇಕಾಗಿರುತ್ತದೆ. ಈ ಗೌರವ ಹುದ್ದೆಗೆ ಇಚ್ಛೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇಚ್ಛೆಯುಳ್ಳ ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ 2025ರ ಏಪ್ರಿಲ್, 04 ರೊಳಗೆ ಸಲ್ಲಿಸುವಂತೆ ಪೌರರಕ್ಷಣೆ ಗೃಹರಕ್ಷಕದಳದ ಮಹಾ ಸಮಾದೇಷ್ಟರು ಮತ್ತು ನಿರ್ದೇಶಕರು, ಆರಕ್ಷಕ ಮಹಾ ನಿರ್ದೇಶಕರು ತಿಳಿಸಿದ್ದಾರೆ.