
ಮಂಡ್ಯ: ಸಾಲ ವಸೂಲಾತಿಗೆ ಬಂದ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬೈಕ್ ಗೆ ಬೆಂಕಿ ಹಚ್ಚಿದ ಘಟನೆ ನಾಗಮಂಗಲ ತಾಲೂಕಿನ ಗೆಜ್ಜೆಹೊಸಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಟ್ರ್ಯಾಕ್ಟರ್ ಸಾಲದ ಕಂತು ವಸೂಲು ಮಾಡಲು ಬಂದಿದ್ದ ಮೈಕ್ರೋ ಫೈನಾನ್ಸ್ ಸಿಬ್ಬಂದಿ ರೈತ ಕುಟುಂಬದವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ, ಸಾಲ ಪಡೆದಿದ್ದ ವ್ಯಕ್ತಿಯ ಪುತ್ರನ ಮೇಲೆ ಹಲ್ಲೆ ನಡೆಸಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮೈಕ್ರೋಫೈನಾನ್ಸ್ ಸಿಬ್ಬಂದಿ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ,
ಖಾಸಗಿ ಫೈನಾನ್ಸ್ ನಲ್ಲಿ 2.5 ಲಕ್ಷ ರೂಪಾಯಿ ಟ್ರ್ಯಾಕ್ಟರ್ ಸಾಲ ಪಡೆದುಕೊಂಡಿದ್ದ ಗೆಜ್ಜೆಹೊಸಹಳ್ಳಿಯ ರೈತ ಲಕ್ಷ್ಮಣ ನಾಲ್ಕು ತಿಂಗಳಿನಿಂದ ಸಾಲದ ಕಂತು ಪಾವತಿಸಿರಲಿಲ್ಲ. ಕಂತು ವಸೂಲಿಗೆ ಬೈಕ್ ನಲ್ಲಿ ಬಂದ ಫೈನಾನ್ಸ್ ಸಂಸ್ಥೆಯ ಇಬ್ಬರು ಸಿಬ್ಬಂದಿ ಸಾಲದ ಕಂತು ಪಾವತಿಸದಿದ್ದರೆ ಟ್ರ್ಯಾಕ್ಟರ್ ಜಪ್ತಿ ಮಾಡುವುದಾಗಿ ಒತ್ತಡ ಹೇರಿದ್ದಾರೆ. ಲಕ್ಷ್ಮಣ ಅವರ ಪುತ್ರ ಸುನಿಲ್ ನನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಫೈನಾನ್ಸ್ ಸಿಬ್ಬಂದಿಯ ಬೈಕ್ ಗೆ ಬೆಂಕಿ ಹಚ್ಚಿದ್ದು, ಈ ವೇಳೆ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.