
ಧಾರವಾಡ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 11 ವರ್ಷ ಜೈಲು ಶಿಕ್ಷೆ, 50,000 ರೂ. ದಂಡ ವಿಧಿಸಲಾಗಿದೆ.
ಬಾಲಕಿಗೆ 50,000 ರೂ. ಪರಿಹಾರ ನೀಡುವಂತೆ ಧಾರವಾಡದ ವಿಶೇಷ ಫೋಕ್ಸೋ ನ್ಯಾಯಾಲಯದಿಂದ ತೀರ್ಪು ಪ್ರಕಟಿಸಲಾಗಿದೆ. ಅಪರಾಧಿ ಸಿದ್ದನಗೌಡ ಮರಿಲಿಂಗನಗೌಡರಿಗೆ 11 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಧಾರವಾಡದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. 2022ರ ಜುಲೈ 2ರಂದು ಬಾಲಕಿ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಬಾಲಕಿ ಗರ್ಭಿಣಿ ಎಂಬುದು ಖಚಿತ ಪಟ್ಟ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯವರಿಗೆ ಹೇಳಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿ ಆರೋಪಿ ನಿರಂತರವಾಗಿ ಅತ್ಯಾಚಾರ ಎಸಗಿದ್ದ. ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಬಾಲಕಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಗೆ ಹೆರಿಗೆಯಾಗಿ ಮಗು ಮೃತಪಟ್ಟಿತ್ತು. ಮಗುವಿನ ಡಿಎನ್ಎ ಪರೀಕ್ಷೆಯಲ್ಲಿ ಸಿದ್ದನಗೌಡ ಸಿಕ್ಕಿಬಿದ್ದಿದ್ದ.