
ಅಲಿಬಾಗ್: ಮೀನುಗಾರಿಕೆಗೆ ತೆರಳಿದ್ದ ಬೋಟ್ ವೊಂದು ಸಮುದ್ರ ಮಧ್ಯೆಯೇ ಬೆಂಕಿಗಾಹುತಿಯಾಗಿರುವ ಘಟನೆ ಮಹಾರಾಷ್ಟ್ರದ ಅಲಿಬಾಗ್ ನಲ್ಲಿ ನಡೆದಿದೆ.
ಬೋಟ್ ನಲ್ಲಿ 18-20 ಜನ ಮೀನುಗಾರರು ಇದ್ದರು. ಸಮುದ್ರದ ಮಧ್ಯ ಭಾಗದತ್ತ ಬೋಟ್ ತೆರಳುತ್ತಿದ್ದ ಬೋಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಸಮಯದಲ್ಲಿ ಇಡೀ ಬೋಟ್ ಹೊತ್ತಿ ಉರಿದಿದೆ. ಬೋಟ್ ನಲ್ಲಿದ್ದ ಮೀನುಗಾರರು ಸಮುದ್ರಕ್ಕೆ ಹಾರಿ ಪ್ರಾಣ ರಕ್ಷಿಸಿಕೊಂಡಿದ್ದಾರೆ.
ಬೋಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೋಟ್ ನ ಶೇ.80ರಷ್ಟು ಭಾಗ ಸುಟ್ಟು ಕರಕಲಾಗಿದೆ. ಬೋಟ್ ನಲ್ಲಿದ್ದ 18-20 ಜನ ಮೀನುಗಾರು ಸುರಕ್ಷಿತವಾಗಿ ದಡ ಸೇರಿದ್ದಾರೆ ಎಂದು ತಿಳಿದುಬಂದಿದೆ.