ಆಗ್ರಾ: ಪತ್ನಿಯ ಕಿರುಕುಳದಿಂದ ಬೇಸತ್ತು ಟಿಸಿಎಸ್ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಗ್ರಿ ಜಿಲ್ಲೆಯಲ್ಲಿ ನಡೆದಿದೆ.
ಮಾನವ್ ಶರ್ಮಾ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಸಾಯುವ ಮೊದಲು ಏಳು ನಿಮಿಷಗಳ ವೀಡಿಯೊ ಮಾಡಿ ಹರಿಬಿಟ್ಟು ನಂತರ ಸೂಸೈಡ್ ಮಾಡಿಕೊಂಡಿದ್ದಾನೆ.ವೀಡಿಯೊದಲ್ಲಿ ‘ತನ್ನ ಹೆಂಡತಿ ತನಗೆ ಕಿರುಕುಳ ನೀಡಿದ್ದಾಳೆ’ ಎಂದು ಆರೋಪಿಸಿದ್ದಾನೆ . ಪೊಲೀಸರ ಪ್ರಕಾರ, ಶರ್ಮಾ ಟಿಸಿಎಸ್ ನಲ್ಲಿ ನೇಮಕಾತಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಅವರ ಪೋಷಕರು ಸಿಎಂ ಪೋರ್ಟಲ್ನಲ್ಲಿ ದೂರು ದಾಖಲಿಸಿದ್ದಾರೆ ಮತ್ತು ತಮ್ಮ ಮಗನಿಗೆ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ಶರ್ಮಾ ಸುಮಾರು ಏಳು ನಿಮಿಷಗಳ ಭಾವನಾತ್ಮಕ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ, ವೀಡಿಯೊದಲ್ಲಿ, ಅವರು “ಪುರುಷರ ಬಗ್ಗೆ ಯೋಚಿಸಿ ಮತ್ತು ಮಾತನಾಡಿ” ಎಂದು ಜನರನ್ನು ಬೇಡಿಕೊಳ್ಳುವುದನ್ನು ಕಾಣಬಹುದು, ತಮ್ಮ ನಿರ್ಧಾರಕ್ಕಾಗಿ ತಮ್ಮ ಹೆತ್ತವರಲ್ಲಿ ಕ್ಷಮೆಯಾಚಿಸಿದ್ದಾರೆ.ಅಪ್ಪ ಕ್ಷಮಿಸಿ, ಅಮ್ಮಾ ಕ್ಷಮಿಸಿ ಹುಡುಗರೇ ದಯವಿಟ್ಟು ಅರ್ಥಮಾಡಿಕೊಳ್ಳಿ, ನಾನು ಹೋದ ತಕ್ಷಣ, ಎಲ್ಲವೂ ಸರಿಹೋಗುತ್ತದೆ. ನಾನು ಸತ್ತ ನಂತರ ಎಲ್ಲವೂ ಸುಧಾರಿಸುತ್ತದೆ. ಆದ್ದರಿಂದ, ನನ್ನನ್ನು ಹೋಗಲು ಬಿಡಿ …” ಎಂದು ಅವರು ಭಾವನಾತ್ಮಕ ವೀಡಿಯೊದಲ್ಲಿ ಹೇಳಿದ್ದಾರೆ.