
ಬೆಂಗಳೂರು: ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ರಾಜ್ಯಕ್ಕೆ ವಾಪಾಸ್ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ವಿರೋಧಿಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ತಮ್ಮ ನಾಯಕತ್ವದಲ್ಲೇ ಚುನಾವಣೆ ನಡೆಯಲಿದೆ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಾನು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದೇನೆ. ಪಕ್ಷ ನನ್ನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದೆ. ನನಗೆ ಫೇಸ್ ಇದೆ, ವೈಬ್ರೇಷನ್ ಇದೆ ಎಂದು ವಿರೋದಿಗಳಿಗೆ ಟಾಂಗ್ ನೀಡಿದ್ದಾರೆ.
ಪಕ್ಷ ನನಗೆ ಹಲವು ಜವಾಬ್ದಾರಿಗಳನ್ನು ಕೊಟ್ಟು ನಾಯಕನನ್ನಾಗಿ ಮಾಡಿದೆ. ನನ್ನನ್ನು ದೆಹಲಿಗೂ ಕರಿತಾರೆ, ಬಿಹಾರಕ್ಕೂ ಕರಿತಾರೆ. ಕೇರಳ, ತಮಿಳುನಾಡು, ಆಂದ್ರಪ್ರದೇಶಕ್ಕೂ ಕರಿತಾರೆ. ನನಗೆ ಲೀಡರ್ ಶಿಪ್ ಇದೆ ಅಂತ ಬೇರೆ ರಾಜ್ಯಗಳಿಗೆ ಕರೆಯುತ್ತಾರೆ. ನಿಮ್ಮನ್ನು ಕರಿತಾರಾ? ಬೇರೆಯವರನ್ನು ಕರಿತಾರಾ? ಎಂದು ಪ್ರಶ್ನಿಸಿದ್ದಾರೆ.
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ. ನನ್ನ ಲೀಡರ್ ಶಿಪ್ ನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಸಿದ್ದರಾಮಯ್ಯ ನಾಯಕತ್ವವೂ ಇರಲಿದೆ ಎಂದು ಹೇಳಿದರು.
ದೆಹಲಿಗೆ ಹೋದಾಗ ಹೈಕಮಾಂಡ್ ಭೇಟಿಮಾಡಬೇಕು. ನಮ್ಮ ಪಕ್ಷದ ಕಚೇರಿಗೆ ಹೋಗಬೇಕು. ನಮ್ಮ ಪಕ್ಷದ ಕಚೇರಿಗೆ ಹೋಗದೇ ಬಿಜೆಪಿ ಕಚೇರಿಗೆ ಹೋಗಬೇಕಾ? ಎಂದು ಕೇಳಿದರು.