ಬೆಂಗಳೂರು : ಓಂ ಸಿನಿಮಾ ಸ್ಟೈಲಲ್ಲಿ ಪ್ರೇಯಸಿಯ ಕಾರಿಗೆ ಬೆಂಕಿ ಹಚ್ಚಿದ್ದ ರೌಡಿಶೀಟರ್ ರಾಹುಲ್ & ಗ್ಯಾಂಗ್ ಇದೀಗ ಅಂದರ್ ಆಗಿದೆ.
ಫೆ.23 ರಂದು ಪ್ರೇಯಸಿ ಮನೆಗೆ ಹೋಗಿದ್ದ ರಾಹುಲ್ & ಗ್ಯಾಂಗ್ ಪ್ರೇಯಸಿ ತಂದೆಗೆ ಚಾಕು ಇರಿದು ಹಲ್ಲೆ ನಡೆಸಿತ್ತು. ನಂತರ ಪ್ರೇಯಸಿ ಕಾರಿಗೆ ಬೆಂಕಿ ಹಚ್ಚಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ.
ಬೆಂಗಳೂರಿನ ಸುಬ್ರಮಣ್ಯಪುರದಲ್ಲಿ ಈ ಘಟನೆ ನಡೆದಿದ್ದು, ರೌಡಿಶೀಟರ್ ರಾಹುಲ್ & ಗ್ಯಾಂಗ್ ಈ ಕೃತ್ಯ ನಡೆಸಿತ್ತು, ರಾಹುಲ್ ವಿರುದ್ಧ ಕೊಲೆ ಯತ್ನ, ದರೋಡೆ ಸೇರಿ 18 ಕೇಸ್ ಗಳಿದೆ. ಕಳೆದ ಕೆಲವು ತಿಂಗಳಿನಿಂದ ರಾಹುಲ್ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು. ಆದರೆ ಯುವತಿ ನಿರಾಕರಿಸಿದ್ದಳು . ಇದರಿಂದ ಕುಪಿತಗೊಂಡ ರಾಹುಲ್ ಸ್ನೇಹಿತರ ಜೊತೆ ಬಂದು ಪ್ರೇಯಸಿಯ ಕಾರಿಗೆ ಬೆಂಕಿ ಇಟ್ಟಿದ್ದನು. ಅಲ್ಲದೇ ಪ್ರೇಯಸಿ ತಂದೆಗೆ ಚಾಕು ಇರಿದು ಹಲ್ಲೆ ನಡೆಸಿದ್ದನು. ಈತನ ವಿರುದ್ಧ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.