ಭಾರತವು ಪಾಕಿಸ್ತಾನವನ್ನು ಸೋಲಿಸಿದ ಬಳಿಕ, ಪಾಕಿಸ್ತಾನದ ಅಭಿಮಾನಿಯೊಬ್ಬರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆ ಭಾರತದ ನಟಿ ದೀಪಿಕಾ ಪಡುಕೋಣೆಯಂತೆ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಭಾನುವಾರ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತವು ಪಾಕಿಸ್ತಾನಕ್ಕೆ ಹೀನಾಯ ಸೋಲುಣಿಸಿ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಪಾಕಿಸ್ತಾನ ತಂಡವು ಸೋಲಿನ ಬಳಿಕ ಟೂರ್ನಿಯಿಂದ ಹೊರಬಿದ್ದಿದೆ.
ಫರಿಯಾಲ್ ವಕಾರ್ ಎಂಬ ಪಾಕಿಸ್ತಾನದ ಅಭಿಮಾನಿಯ ವಿಡಿಯೋ ವೈರಲ್ ಆಗಿದೆ. ಆಕೆ ನಗುತ್ತಾ ತನ್ನ ಅಸಮಾಧಾನವನ್ನು ಮರೆಮಾಚುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಆಕೆಯ ಅಭಿವ್ಯಕ್ತಿಗಳು ನೆಟ್ಟಿಗರಿಗೆ ಹಿಂದಿ ಚಲನಚಿತ್ರ ನಟಿ ದೀಪಿಕಾ ಪಡುಕೋಣೆಯನ್ನು ನೆನಪಿಸಿದವು.
ಭಾರತದ ವಿರುದ್ಧ ತಂಡದ ಪ್ರದರ್ಶನದ ಬಗ್ಗೆ ಫರಿಯಾಲ್ ತನ್ನ ನಿರಾಶೆಯನ್ನು ವ್ಯಕ್ತಪಡಿಸಿ, ತಂಡವನ್ನು ಬೆಂಬಲಿಸಲು ಬಂದಿದ್ದೆ ಆದರೆ ರಿಜ್ವಾನ್ ನೇತೃತ್ವದ ತಂಡದ ಪ್ರದರ್ಶನವನ್ನು ನೋಡಿದ ನಂತರ ದುಃಖವಾಗಿದೆ ಎಂದು ಹೇಳಿದರು.
View this post on Instagram