ದಕ್ಷಿಣ ಕೊರಿಯಾದ ಅನ್ಸಿಯೋಂಗ್-ಸಿ ನಗರದ ಬಳಿ ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದಿದ್ದು, ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಹೆದ್ದಾರಿ ಮೇಲ್ಸೇತುವೆಯ ಒಂದು ಭಾಗ ಮಂಗಳವಾರ ಕುಸಿದಿದೆ ಎಂದು ವರದಿಗಳು ತಿಳಿಸಿವೆ. ಘಟನೆಯಲ್ಲಿ ಕನಿಷ್ಠ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಐವರು ಗಾಯಗೊಂಡಿದ್ದಾರೆ ಎಂದು ನಂಬಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೀಡಿಯೊವು ಹೆದ್ದಾರಿಯ ಒಂದು ಭಾಗ ಕುಸಿದ ಕ್ಷಣವನ್ನು ತೋರಿಸುತ್ತದೆ.
BREAKING: At least 3 construction workers killed, 5 injured after portion of highway overpass collapsed near Anseong, South Korea pic.twitter.com/7m0E8zktT4
— BNO News (@BNONews) February 25, 2025