ಬೆಂಗಳೂರು : ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ನಡೆಯುತ್ತಿರುವ ಹಿನ್ನೆಲೆ, ವೀಕ್ಷಕರ ಅನುಕೂಲಕ್ಕಾಗಿ ಮೆಟ್ರೋ ಸಂಚಾರ ಅವಧಿ ವಿಸ್ತರಿಸಲು ಬಿಎಂಆರ್ಸಿಎಲ್ ನಿರ್ಧರಿಸಿದೆ.
ಫೆಬ್ರವರಿ 22, 24, 25, 26, 27, 28 ಮತ್ತು ಮಾರ್ಚ್ 1 ರಂದು ಪಂದ್ಯಗಳು ನಡೆಯಲಿದ್ದು, ಅಂದು ರಾತ್ರಿ 11.20ಕ್ಕೆ ಮೆಟ್ರೋ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗಗಳ ನಾಲ್ಕು ಟರ್ಮಿನಲ್ಗಳಿಂದ ಕೊನೆಯ ಮೆಟ್ರೋ ರೈಲುಗಳು ಹೊರಡಲಿವೆ. ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನಾಲ್ಕು ಟರ್ಮಿನಲ್ಗಳ ಕಡೆಗೆ ರಾತ್ರಿ 11.55ಕ್ಕೆ ರೈಲುಗಳು ಹೊರಡಲಿವೆ.