alex Certify SHOCKING: ತಂದೆಯೊಂದಿಗೆ ಜಮೀನಿಗೆ ಬಂದು ಕೊಳವೆ ಬಾವಿಗೆ ಬಿದ್ದ ಬಾಲಕ: ರಕ್ಷಣೆಗೆ NDRF ಹರಸಾಹಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ತಂದೆಯೊಂದಿಗೆ ಜಮೀನಿಗೆ ಬಂದು ಕೊಳವೆ ಬಾವಿಗೆ ಬಿದ್ದ ಬಾಲಕ: ರಕ್ಷಣೆಗೆ NDRF ಹರಸಾಹಸ

ರಾಜಸ್ಥಾನದ ಝಲಾವರ್ ಜಿಲ್ಲೆಯ ಕೃಷಿ ಜಮೀನಿನಲ್ಲಿ ಭಾನುವಾರ 5 ವರ್ಷದ ಬಾಲಕ 32 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಪೊಲೀಸರ ಪ್ರಕಾರ, ಪ್ರಹ್ಲಾದ್ ಹೊಲದಲ್ಲಿ ಆಟವಾಡುತ್ತಿದ್ದಾಗ ಮಧ್ಯಾಹ್ನ 1.15 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆತನ ಪೋಷಕರು ಹೊಲದ ಇನ್ನೊಂದು ಬದಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ ಕೊಳವೆ ಬಾವಿಯ ಬಳಿಯ ಕಲ್ಲಿನ ಚಪ್ಪಡಿಯ ಮೇಲೆ ಕುಳಿತುಕೊಂಡು ಅದರೊಳಗೆ ಜಾರಿ ಬಿದ್ದಿದ್ದಾನೆ ಎಂದು ಹೇಳಲಾಗಿದೆ.

ಪ್ರಹ್ಲಾದ್ ಪ್ರಸ್ತುತ 32 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿದ್ದು, ಆಕ್ಸಿಜನ್ ಪೂರೈಕೆ ಮಾಡಿವೆ.

ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಸ್ಥಳೀಯ ಯಂತ್ರಗಳನ್ನು ಬಳಸಿಕೊಂಡು ಬಾಲಕನನ್ನು ಹೊರತೆಗೆಯಲು ತಂಡಗಳು ಯೋಜಿಸುತ್ತಿವೆ ಎಂದು ಎಸ್‌ಡಿಎಂ ಛತ್ರಪಾಲ್ ಚೌಧರಿ ಹೇಳಿದರು.

ಬಾಲಕನ ತಂದೆ ಕಲುಲಾಲ್ ಅವರ ಪ್ರಕಾರ, ಎರಡು ದಿನಗಳ ಹಿಂದೆ ಕೊಳವೆ ಬಾವಿಯನ್ನು ಅಗೆಯಲಾಗಿತ್ತು. ಅದರಿಂದ ನೀರು ಹೊರಹರಿವು ಇರಲಿಲ್ಲ ಮತ್ತು ಅದನ್ನು ಮುಚ್ಚಲು ನಿರ್ಧರಿಸಲಾಗಿತ್ತು. ಬೋರ್‌ವೆಲ್ ಗೆ ಸ್ವಲ್ಪ ಮಣ್ಣು ತುಂಬಿಸಿದ್ದರಿಂದ ಹುಡುಗ ಹೆಚ್ಚು ಆಳಕ್ಕೆ ಜಾರಿಕೊಳ್ಳುವ ಸಾಧ್ಯತೆಯಿಲ್ಲ. ಸ್ಥಳದಲ್ಲಿ ವೈದ್ಯಕೀಯ ತಂಡವೂ ಇದೆ. ಪೈಪ್‌ಗಳ ಮೂಲಕ ಬಾಲಕನಿಗೆ ಆಮ್ಲಜನಕವನ್ನು ಪೂರೈಸಲಾಗುತ್ತಿದೆ ಎಂದು ಡಿಎಸ್‌ಪಿ ಜೈಪ್ರಕಾಶ್ ಅಟಲ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...