
ಹಾವೇರಿ: ಆಟವಾಡುತ್ತಿದ್ದಾಗ ಕೆರೆಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಕೊಪ್ಪರಶಿಕೊಪ್ಪ ಗ್ರಾಮದ ಬಳಿ ನಡೆದಿದೆ.
ನಿಖಿಲ್ ನಾಗೋಜಿ(11), ಧನುಷ್ ಚೋಳಪ್ಪನವರ(13) ಮೃತಪಟ್ಟವರು ಎಂದು ಹೇಳಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೊಪ್ಪರಶಿಕೊಪ್ಪ ಗ್ರಾಮದ ಬಳಿ ಕೆರೆಗೆ ಬಿದ್ದು ಬಾಲಕರು ಮೃತಪಟ್ಟಿದ್ದಾರೆ.
ಕೆರೆಯ ಬಳಿ ಆಟವಾಡುವಾಗ ಬಾಲಕರು ನೀರಿಗೆ ಬಿದ್ದಿದ್ದು, ಈಜು ಬಾರದೇ ನೀರಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.