ಪುದುಚೇರಿಯ ಮಣಕುಲ ವಿನಯಾಗರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ ವಿಶ್ವಾ ರಾಜಕುಮಾರ್ ಮೆಮೊರಿ ಲೀಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಈ ಆನ್ಲೈನ್ ಸ್ಪರ್ಧೆಯಲ್ಲಿ, 80 ಯಾದೃಚ್ಛಿಕ ಸಂಖ್ಯೆಗಳ ಕ್ರಮವನ್ನು ನೆನಪಿಟ್ಟುಕೊಳ್ಳುವುದು ಸೇರಿದಂತೆ ವಿವಿಧ ಸವಾಲುಗಳನ್ನು ಒಳಗೊಂಡಿರುತ್ತದೆ.
ಮೆಮೊರಿ ಲೀಗ್ ವೆಬ್ಸೈಟ್ ಪ್ರಕಾರ, ವಿಶ್ವಾ ರಾಜಕುಮಾರ್ 5,000 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ. ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಅವರು ಪುದುಚೇರಿಯ ಮಣಕುಲ ವಿನಯಾಗರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ರಾಜಕುಮಾರ್, 80 ಸಂಖ್ಯೆಗಳನ್ನು 13.50 ಸೆಕೆಂಡ್ಗಳಲ್ಲಿ ಮತ್ತು 30 ಚಿತ್ರಗಳನ್ನು 8.40 ಸೆಕೆಂಡ್ಗಳಲ್ಲಿ ನೆನಪಿಟ್ಟುಕೊಂಡರು, ನೆನಪಿಟ್ಟುಕೊಳ್ಳುವ ಅವರ ತಂತ್ರ ಮತ್ತು ಕಾರ್ಯತಂತ್ರಗಳ ಬಗ್ಗೆ ನ್ಯೂಯಾರ್ಕ್ ಟೈಮ್ಸ್ನೊಂದಿಗೆ ಮಾತನಾಡಿದ್ದಾರೆ.