
ಬೆಂಗಳೂರು: ಕುಡಿತದ ದಾಸನಾಗಿದ್ದ ಮಗ ಕುಡಿಯಲು ಹಣ ಕೊಟ್ಟಿಲ್ಲ ಎಂದು ತಾಯಿಯನ್ನೇ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನ ಜ್ಞಾನಭಾರತಿ ವ್ಯಾಪ್ತಿಯಲ್ಲಿ ನಡೆದಿದೆ.
ಜಯಲಕ್ಷ್ಮೀ ಎಂಬ ಮಹಿಳೆ ಗಂಭೀರವಾಗಿ ಹಲ್ಲೆಗೊಳಗಾಗಿದ್ದಾರೆ. ರಾಹುಲ್ ಅಲಿಯಾಸ್ ಕಲರ್ಸ್ ತಾಯಿಗೆ ಚಾಕುವಿನಿಂದ ಇರಿದ ಮಗ. ಕೂಲಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜಯಲಕ್ಷ್ಮೀ ಪುತ್ರ ಕುಡಿತದ ಚಟಕ್ಕೆ ಒಳಗಾಗಿದ್ದ. ಕುಡಿಯಲು ದುಡ್ದು ಕೊಡುವಂತೆ ತಾಯಿಗೆ ಕೇಳಿದ್ದ. ತಾಯಿ ನಿರಾಕರಿಸಿದ್ದಕ್ಕೆ ಜಗಳವಾಡಿದ್ದಾನೆ. ಈ ವೇಳೆ ಚಾಕುವಿನಿಂದ ತಾಯಿಗೆ ಇರಿದು, ಆಕೆಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.