ಹಾವು ಕಡಿತವು ಮಾರಣಾಂತಿಕವಾಗಬಲ್ಲದು, ಆದರೆ ತಕ್ಷಣದ ಚಿಕಿತ್ಸೆಯಿಂದ ಜೀವ ಉಳಿಸಬಹುದು. ಕೆಲವು ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ನಿರ್ದಿಷ್ಟ ಸಸ್ಯಗಳ ರಸವನ್ನು ಹಾವು ಕಚ್ಚಿದವರಿಗೆ ನೀಡಲಾಗುತ್ತದೆ. ಅವುಗಳಲ್ಲಿ ದ್ರೋಣಪುಷ್ಪಿ ಮತ್ತು ಗಿಲೋಯ್ ಮುಖ್ಯವಾದವು.
ದ್ರೋಣಪುಷ್ಪಿ ಗಿಡವು ಸಾಮಾನ್ಯವಾಗಿ ಕಾಡು ಪ್ರದೇಶಗಳಲ್ಲಿ ಮತ್ತು ರಸ್ತೆ ಬದಿಯಲ್ಲಿ ಕಂಡುಬರುತ್ತದೆ. ಇದು ಒಂದು ರೀತಿಯ ಕಳೆ ಸಸ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ಗುಮ್ಮ ಎಂದು ಕರೆಯಲಾಗುತ್ತದೆ. ಹಾವು ಕಚ್ಚಿದ ತಕ್ಷಣ ದ್ರೋಣಪುಷ್ಪಿಯ ರಸವನ್ನು ತೆಗೆದು ರೋಗಿಗೆ ಕುಡಿಸಿದರೆ ವಿಷದ ಪ್ರಮಾಣ ಒಂದಷ್ಟು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಇನ್ನೊಂದು ಮನೆ ಮದ್ದು ಎಂದರೆ ಗಿಲೋಯ್. ಗಿಲೋಯ್ ಗಿಡದ ಬೇರಿನ ರಸವನ್ನು ತೆಗೆದು ಕುಡಿಸಿದರೆ ಹಾವು ಕಡಿತದ ವಿಷ ಕಡಿಮೆಯಾಗುತ್ತದೆ. ಕೆಲವೊಮ್ಮೆ ಹಾವು ಕಚ್ಚಿದ ವ್ಯಕ್ತಿಯ ದೇಹವು ನೀಲಿ ಬಣ್ಣಕ್ಕೆ ತಿರುಗುತ್ತದೆ, ಆ ಸಂದರ್ಭದಲ್ಲಿ ಗಿಲೋಯ್ ರಸವನ್ನು ರೋಗಿಯ ಕಿವಿ, ಕಣ್ಣು ಮತ್ತು ಮೂಗಿಗೆ ಹಾಕಬೇಕು. ಇದರಿಂದ ತಕ್ಷಣದ ಲಾಭ ಸಿಗುತ್ತದೆ ಎನ್ನಲಾಗುತ್ತದೆ.
ಇವು ಕೆಲವು ಸಾಂಪ್ರದಾಯಿಕ ವಿಧಾನಗಳಾಗಿದ್ದು, ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ. ಹಾವು ಕಚ್ಚಿದ ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಅತ್ಯಗತ್ಯ.
ಈ ವರದಿಯು ಹಾವು ಕಡಿತಕ್ಕೆ ಸಂಬಂಧಿಸಿದ ಕೆಲವು ಮನೆ ಮದ್ದುಗಳ ಬಗ್ಗೆ ಮಾಹಿತಿಯನ್ನು ಮಾತ್ರ ನೀಡುತ್ತದೆ. ಹಾಗೆಂದು ಇದು ಅಂತಿಮವಲ್ಲ. ಆದಾಗ್ಯೂ, ವೈದ್ಯಕೀಯ ಸಲಹೆಯಿಲ್ಲದೆ ಈ ವಿಧಾನಗಳನ್ನು ಅನುಸರಿಸಬಾರದು. ಅಲ್ಲದೇ ಹಾವು ಕಡಿತ ಉಂಟಾದ ಸಂದರ್ಭದಲ್ಲಿ ಮನೆಮದ್ದಿಗೆ ಮೊರೆ ಹೋಗದೆ ವಿಷ ಇಳಿಸುವ ಸಲುವಾಗಿ ತಕ್ಷಣದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕು.