ಬೆಂಗಳೂರು : ಅತ್ತೆ ಕೊಲ್ಲಲು ವೈದ್ಯರ ಬಳಿ ಸೊಸೆ ಮಾತ್ರೆ ಕೇಳಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸ್ ವಿಚಾರಣೆಯಲ್ಲಿ ಮಹಿಳೆ ಬೇರೆ ಕಥೆ ಕಟ್ಟಿದ್ದಾಳೆ.
ಹೌದು, ನಾನು ವೈದ್ಯರ ಬಳಿ ಮಾತ್ರೆ ಕೇಳಿದ್ದು ಅತ್ತೆ ಕೊಲ್ಲಲು ಅಲ್ಲ , ನಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ. ಅತ್ತೆ –ನಾನು ಬಹಳ ಚೆನ್ನಾಗಿದ್ದೇವೆ. ಅತ್ತೆಯನ್ನು ಕೊಲ್ಲುವ ಉದ್ದೇಶ ನನಗಿರಲಿಲ್ಲ , ನಾನು ವೈದ್ಯರ ಬಳಿ ಮಾತ್ರೆ ಕೇಳಿದ್ದು ಅತ್ತೆ ಕೊಲ್ಲಲು ಅಲ್ಲ , ನಾನೇ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮಾತ್ರೆ ಕೇಳಿದೆ. ಗೂಗಲ್ ನಲ್ಲಿ ಸರ್ಚ್ ಮಾಡಿ ವೈದ್ಯರ ನಂಬರ್ ಪಡೆದು ಮೆಸೇಜ್ ಮಾಡಿದೆ ಎಂದು ಸಹನಾ ಹೇಳಿದ್ದಾಳೆ. ಪೊಲೀಸ್ ವಿಚಾರಣೆಯಲ್ಲಿ ಮಹಿಳೆ ಹೇಳಿಕೆ ನೀಡಿದ್ದು, ತಾನೇ ಸಾಯೋದಕ್ಕೆ ಮಾತ್ರೆ ಕೇಳಿರುವುದಾಗಿ ಹೇಳಿದ್ದಾಳೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಸಹನಾ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಚೌಟ್ರಿಪಾಳ್ಯದಲ್ಲಿ ವಾಸವಾಗಿರುವ ಸಹನಾಗೆ ಮದುವೆಯಾಗಿ ಒಂದೂವರೆ ವರ್ಷದ ಮಗು ಕೂಡ ಇದೆ. ಬೆಂಗಳೂರಿನ ಸಂಜಯನಗರ ಠಾಣೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಅತ್ತೆಯನ್ನು ಕೊಲ್ಲಲು ಸೊಸೆಯೇ ವೈದ್ಯರ ಬಳಿ ಮಾತ್ರೆ ಕೇಳಿದ್ದಳು.ಅತ್ತೆಯನ್ನು ಕೊಲ್ಲಲು ನಿರ್ಧರಿಸಿದ ಸೊಸೆ ವೈದ್ಯರೊಬ್ಬರಿಗೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿದ್ದಾರೆ. ನನಗೆ ಅತ್ತೆ ಬಹಳ ಕಿರುಕುಳ, ಹಿಂಸೆನೀಡುತ್ತಾರೆ. ಅವರಿಗೆ ವಯಸ್ಸಾಗಿದ್ದು, ಅವರನ್ನು ಕೊಲ್ಲುವುದು ಹೇಗೆ..? ಈ ಬಗ್ಗೆ ನನಗೆ ಮಾಹಿತಿ ನೀಡಿ ಎಂದು ವೈದ್ಯರಿಗೆ ಸೊಸೆ ಮೆಸೇಜ್ ಮಾಡಿದ್ದರು.ಮೆಸೇಜ್ ನೋಡಿ ಶಾಕ್ ಆದ ವೈದ್ಯರು ಬುದ್ದಿವಾದ ಹೇಳಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಡಾಕ್ಟರ್ ಬುದ್ದಿವಾದ ಹೇಳುತ್ತಿದ್ದಂತೆ ಸೊಸೆ ಮೆಸೇಜ್ ಡಿಲೀಟ್ ಮಾಡಿದ್ದಾರೆ. ತಕ್ಷಣ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದ ವೈದ್ಯರು ಪೊಲೀಸರಿಗೆ ಕಳುಹಿಸಿ ವಿಚಾರ ತಿಳಿಸಿದ್ದರು.