
ಬೆಂಗಳೂರು: ಮದರಸಾದಲ್ಲಿ ಬಾಲಕಿಯರ ಮೇಲೆ ವ್ಯಕ್ತಿಯೋರ್ವ ಕ್ರೌರ್ಯ ಮೆರೆದಿರುವ ಘಟನೆ ಬೆಂಗಳೂರಿನ ಹೆಗಡೆ ನಗರದಲ್ಲಿ ನಡೆದಿದೆ.
ಮದರಸಾದ ಕಚೇರಿಗೆ ಬಾಲಕಿಯರನ್ನು ಕರೆದು ಕಪಾಳ ಮೋಕ್ಷ ಮಾಡಿ, ಕಾಲಿನಿಂದ ಒದ್ದು, ಬೆನ್ನಿಗೆ ಮನಬಂದಂತೆ ಹೊಡೆದು ಅಟ್ಟಹಾಸ ಮೆರೆದಿದ್ದಾನೆ. ಬಾಲಕಿಯರ ಮೇಲೆ ಮನಬಂದಂತೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ರಶೀದ್ ಮಹಮ್ಮದ್ ಹಸನ್ ಎಂಬಾತ ಬಾಲಕಿಯರ ಮೇಲೆ ಈ ರೀತಿ ಹಲ್ಲೆ ನಡೆಸಿದ್ದಾನೆ. ಹಲ್ಲೆ ವಿಡಿಯೋ ನೋಡಿ ಆಕ್ರೋಶಗೊಂಡಿರುವ ಪೋಷಕರು ರಶೀದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.