
ನವದೆಹಲಿ: ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಅನೇಕ ಔಷಧ ಪದಾರ್ಥಗಳ ಮೇಲಿನ ಆಮದು ಸುಂಕ ಕಡಿತ ಮಾಡಲಾಗಿದೆ. ಇದಕ್ಕೆ ತಕ್ಕಂತೆ ಔಷಧಗಳ ಗರಿಷ್ಠ ದರ ಕಡಿಮೆ ಮಾಡಬೇಕೆಂದು ಔಷಧ ಉತ್ಪಾದಕ ಮತ್ತು ಮಾರ್ಕೆಟಿಂಗ್ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಫೆಬ್ರವರಿ 17ರಂದು ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರ ಸುತ್ತೋಲೆ ಹೊರಡಿಸಿದ್ದು, ಔಷಧ ದರಗಳ ಪರಿಷ್ಕೃತ ಪಟ್ಟಿಯನ್ನು ಫಾರ್ಮಾ ಕಂಪನಿಗಳು ಬಿಡುಗಡೆ ಮಾಡಬೇಕು. ಯಾವ ಔಷಧಗಳ ಬೆಲೆಯಲ್ಲಿ ಬದಲಾವಣೆ ಆಗಿದೆ ಎನ್ನುವ ಮಾಹಿತಿಯನ್ನು ಡೀಲರ್ ಗಳು ರಾಜ್ಯ ಔಷಧ ಪ್ರಾಧಿಕಾರಗಳು, ಸರ್ಕಾರಿ ಪ್ರಾಧಿಕಾರಗಳಿಗೆ ಕಳುಹಿಸಬೇಕು. ಆ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿದೆ.
2025- 26 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ 36 ಜೀವ ರಕ್ಷಕ ಔಷಧಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ. ಶ್ವಾಸಕೋಶ ಕ್ಯಾನ್ಸರ್ ಗೆ ಬಳಸುವ ಚಿಕಿತ್ಸೆಗೆ ಬಳಸುವ, ಅಸ್ತಮಾ ಚಿಕಿತ್ಸೆಗೆ ಬಳಸುವ 36 ಔಷದಗಳ ಮೇಲಿನ ಸುಂಕ ರದ್ದುಗೊಳಿಸಲಾಗಿದೆ.