ಶಿವಮೊಗ್ಗ : ಆಲ್ಕೊಳ ವಿ.ವಿ.ಕೇಂದ್ರದಲ್ಲಿ ಫೀಡರ್ ಎ.ಎಫ್-8ರ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ. 20 ರಂದು ಬೆಳಗ್ಗೆ 10.00 ರಿಂದ ಸಂಜೆ 5.00 ರವರಗೆ ಸೂಡ ಕಾಂಪ್ಲೆಕ್ಸ್, ದಯಾನಂದ ಪ್ರಿಂಟರ್, ಕಾಶೀಪುರ, ಲಕ್ಕಪ್ಪ ಬಡಾವಣೆ, ರೇಣುಕಾಂಬ ಬಡಾವಣೆ, ಲಕ್ಷ್ಮೀಪುರ ಬಡಾವಣೆ, ಕೆಂಚಪ್ಪ ಬಡಾವಣೆ, ಕುವೆಂಪು ಬಡಾವಣೆ, ತಮಿಳ್ ಕ್ಯಾಂಪ್ ಮತ್ತು ಕರುಮಾರಿಯಮ್ಮ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.