ಬೆಂಗಳೂರು : ಕಾಫಿ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಕಾಫಿಪುಡಿ ದರ ಹೆಚ್ಚಳ ಹಿನ್ನೆಲೆ ಒಂದು ಕಪ್ ಕಾಫಿ ಬೆಲೆ 5 ರೂ ಹೆಚ್ಚಳವಾಗಿದೆ.
ಹೌದು, ಫಿಲ್ಟರ್ ಕಾಫಿ ದರವನ್ನು 5 ರೂ. ಹೆಚ್ಚಳ ಮಾಡಲು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಒಪ್ಪಿಗೆ ನೀಡಿದ್ದು, ಮಾರ್ಚ್ 1ರಿಂದಲೇ ಹೊಸ ದರ ಜಾರಿಗೆ ಬರಲಿದೆ
ಕಾಫಿ ಪುಡಿಯ ಬೆಲೆಯನ್ನು ಹೆಚ್ಚಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಅರೇಬಿಕಾ ಮತ್ತು ರೋಬಸ್ಟಾ ಕಾಫಿಯ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಹೋಟೆಲ್, ಕೆಫೆ ಮಾಲೀಕರು ಹೇಳಿದ್ದಾರೆ. ಈ ಬಾರಿ ಕೇರಳ, ಕೊಡಗು ಜಿಲ್ಲೆಗಳಲ್ಲಿ ಕಾಫಿ ಬೆಳೆ ಕುಸಿತವಾಗಿದೆ. ಆದ್ದರಿಂದ ಕಾಫಿ ಬೀಜಕ್ಕೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ.