alex Certify BIG NEWS : ರಾಜ್ಯದಲ್ಲಿ ಶತಮಾನ ಪೂರೈಸಿರುವ ಸರ್ಕಾರಿ ಶಾಲೆಗಳ ಮಾಹಿತಿ, ದಾಖಲೆಗಳನ್ನು ಸಲ್ಲಿಸುವಂತೆ ‘ಶಿಕ್ಷಣ ಇಲಾಖೆ’ ಆದೇಶ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯದಲ್ಲಿ ಶತಮಾನ ಪೂರೈಸಿರುವ ಸರ್ಕಾರಿ ಶಾಲೆಗಳ ಮಾಹಿತಿ, ದಾಖಲೆಗಳನ್ನು ಸಲ್ಲಿಸುವಂತೆ ‘ಶಿಕ್ಷಣ ಇಲಾಖೆ’ ಆದೇಶ.!

ಬೆಂಗಳೂರು : ರಾಜ್ಯದಲ್ಲಿ ಶತಮಾನ ಪೂರೈಸಿರುವ ಸರ್ಕಾರಿ ಶಾಲೆಗಳ ಮಾಹಿತಿ, ದಾಖಲೆಗಳನ್ನು ಸಲ್ಲಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಶತಮಾನ ಪೂರೈಸಿರುವ ಸರ್ಕಾರಿ ಶಾಲೆಗಳ ಸ್ಥಿತಿ ಗತಿಯ ಕುರಿತು ಮಾಹಿತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದವರು ಸಿದ್ಧಪಡಿಸಿದ ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿ ಈ ಕಛೇರಿಗೆ ಸಲ್ಲಿಸುವಂತೆ ತಿಳಿಸಲಾಗಿರುತ್ತದೆ.

ರಾಜ್ಯದಲ್ಲಿ ಶತಮಾನ ಪೂರೈಸಿರುವ ಶಾಲೆಗಳ ಕುರಿತಾದ ದೃಢೀಕೃತ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ ಇ-ಮೇಲ್ ವಿಳಾಸ ವಿಳಾಸ adm2cpi@gmail.com ಸಾಫ್ಟ್ ಪ್ರತಿಯನ್ನು ಹಾಗೂ ದೃಢೀಕೃತ ಭೌತಿಕ ಪ್ರತಿಯನ್ನು ಈ ಕಛೇರಿಗೆ ಅತ್ಯಂತ ಜರೂರಾಗಿ ಸಲ್ಲಿಸುವಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ರವರಿಗೆ ಉಲ್ಲೇಖಿತ ಪತ್ರದಲ್ಲಿ ಸೂಚಿಸಲಾಗಿತ್ತು.

2: 20/1/2025, 29/01/2025, 30/01/2025, 31/01/2025, 06/02/2025 2 11/02/2025 ಗಳಂದು ಸದರಿ ವರದಿಯನ್ನು ಮೇಲ್ಕಂಡಂತೆ ಸಲ್ಲಿಸಲು ಅಗತ್ಯ ಕ್ರಮಗಳನ್ನು ವಹಿಸುವಂತೆ ವೀಡಿಯೋ ಕಾನೂರೆನ್ಸ್ ಮೂಲಕ ಸದರಿ ಅಧಿಕಾರಿಗಳಿಗೆ ಹಲವು ಬಾರಿ ಸೂಚಿಸಲಾಗಿತ್ತು.

ಅದಾಗ್ಯೂ ಬೆಂಗಳೂರು ಉತ್ತರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಕೋಲಾರ, ಮಧುಗಿರಿ, ಚಾಮರಾಜನಗರ, ರಾಮನಗರ, ಮಂಡ್ಯ, ಮಂಗಳೂರು(ದ.ಕ), ಚಿಕ್ಕಮಂಗಳೂರು, ಕೊಡಗು. ಮೈಸೂರು, ಬಳ್ಳಾರಿ, ಬಾಗಲಕೋಟೆ, ಚಿಕ್ಕೋಡಿ ಹಾವೇರಿ ತುಮಕೂರು, ಶಿರಸಿ, ಧಾರವಾಡ ಗದಗ, ಉತ್ತರ ಕನ್ನಡ, ವಿಜಯಪುರ, ರಾಯಚೂರು, ಕಲಬುರಗಿ, ಕೊಪ್ಪಳ, ಜಿಲ್ಲೆಗಳ ಡಯಟ್ ಗಳಿಂದ ಮಾತ್ರ ಸದರಿ ವರದಿಗಳು ಸ್ವೀಕೃತವಾಗಿದ್ದು, ಉಳಿದ ಜಿಲ್ಲೆಗಳಿಂದ ಈವರೆಗೂ ಸ್ವೀಕೃತವಾಗಿರುವುದಿಲ್ಲ. ಈ ಕಛೇರಿಯ ವತಿಯಿಂದ ಸದರಿ ವರದಿಗಳನ್ನು ಕ್ರೋಢಿಕರಿಸಿ ಅತ್ಯಂತ ಜರೂರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿದ್ದು, ಅಪೂರ್ಣವಾದ ಮಾಹಿತಿ ಸ್ವೀಕೃತವಾಗಿರುವುದರಿಂದ ಈ ಪ್ರಕ್ರಿಯೆಯನ್ನು ಸಕಾಲದಲ್ಲಿ ಪೂರ್ಣಗೊಳಿಸುವುದು ಸಾಧ್ಯವಾಗಿರುವುದಿಲ್ಲ.

ಈ ಹಿನ್ನಲೆಯಲ್ಲಿ ವಿಳಂಬಕ್ಕೆ ಅಸ್ಪದ ನೀಡದೆ ಸದರಿ ವರದಿಗಳನ್ನು ದಿನಾಂಕ: 18.02.2025 ರ ಪೂರ್ವಾಹ್ನ 12.30 ರೊಳಗೆ ಉಲ್ಲೇಖಿತ ಪತ್ರದಲ್ಲಿ ತಿಳಿಸಿರುವ ವಿಧಾನದಲ್ಲಿ ಈ ಕಛೇರಿಗೆ ಸಲ್ಲಿಸುವಂತೆ ಈ ಮೂಲಕ ಮತ್ತೊಮ್ಮ ಸೂಚಿಸಿದೆ. ತಪ್ಪಿದಲ್ಲಿ ಮುಂದಿನ ಆಗು ಹೋಗುಗಳಿಗೆ ಆಯಾ ಜಿಲ್ಲಾ ಉಪನಿರ್ದೇಶಕರು (ಅಭಿವೃದ್ಧಿ)ರವರನ್ನೇ ನೇರವಾಗಿ ಹೊಣೆಗಾರರನ್ನಾಗಿಸಿ, ಸೂಕ್ತ ಶಿಸ್ತು ಕ್ರಮಗಳನ್ನು ಜರುಗಿಸಲು ಪರಿಶೀಲಿಸಲಾಗುವುದು ಎಂದು ಈ ಮೂಲಕ ಎಚ್ಚರಿಸಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...