ಬೆಂಗಳೂರು : ಬೆಂಗಳೂರಿನಲ್ಲಿ ನೀರು ವ್ಯರ್ಥ ಮಾಡಿದ್ರೆ 5000 ರೂ. ದಂಡ ವಿಧಿಸಲಾಗುತ್ತದೆ.
ಹೌದು, ಬೇಸಿಗೆಗೂ ಮುನ್ನ ಜಲಮಂಡಳಿ ಎಚ್ಚೆತ್ತುಕೊಂಡಿದ್ದು, ಈ ಬಾರಿ ನೀರು ವ್ಯರ್ಥ ಮಾಡಿದ್ರೆ 5000 ರೂ ದಂಡ ವಿಧಿಸಲಾಗಿದೆ. ಈ ಬಗ್ಗೆ ಜಲಮಂಡಳಿ ಆದೇಶ ಹೊರಡಿಸಿದೆ.
ಕಳೆದ ಬಾರಿ ಉಂಟಾದ ನೀರಿನ ಅಭಾವ ಆಗದಂತೆ ಜಲಮಂಡಳಿ ಎಚ್ಚರಿಕೆ ವಹಿಸಿದೆ. ಕಾರು, ಬೈಕ್, ಮನೆ ಹಾಗೂ ಇತರೆ ಕೆಲಸಗಳಿಗೆ ನೀರು ವ್ಯರ್ಥ ಮಾಡಿದ್ರೆ ಜಲಮಂಡಳಿ 5000 ದಂಡ ವಿಧಿಸಲಿದೆ.
ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ
*ಅಕ್ಕಿ/ ತರಕಾರಿ ತೊಳೆದ ನೀರನ್ನು ಮರುಬಳಕೆ ಮಾಡಿ, ಸಸ್ಯಗಳಿಗೆ ಬಳಸಿ
*ಸ್ನಾನ ಮಾಡಲು ಬಾತ್ ಟಬ್‌ಗಳನ್ನು ಬಳಸಬೇಡಿ
*ನಲ್ಲಿಗಳು ಸೋರಿಕೆಯಾಗುತ್ತಿದ್ದೆಯೇ ಎಂಬುದನ್ನು ಆಗಾಗ್ಗೆ ಪರೀಕ್ಷಿಸಿ
*ಟ್ಯಾಪ್ ಆನ್ ಮಾಡಿ ಹಲ್ಲು ಉಜ್ಜಬೇಡಿ
*ಒಗೆಯಲು ಹೆಚ್ಚು ಬಟ್ಟೆಗಳಿದ್ದರೆ ಮಾತ್ರ ವಾಷಿಂಗ್ ಮಿಷನ್ ಬಳಸಿ
*ನೀರನ್ನು ಮಿತವಾಗಿ ಬಳಸೋಣ ಜವಾಬ್ದಾರಿಯುತ ಪ್ರಜೆಗಳಾಗೋಣ