
ಟೊರೊಂಟೊ: 80 ಜನರಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನ ಕೆನಡಾದ ಟೊರೊಂಟೊ ಪಿಯರ್ಸನ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದ್ದು, ತಲೆಕೆಳಗಾಗಿ ಉರುಳಿದೆ.
80 ಜನರನ್ನು ಹೊತ್ತೊಯ್ಯುತ್ತಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನವು ಕೆನಡಾದ ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿದ್ದು, ವಿಮಾನ ತಲೆಕೆಳಗಾಗಿ ಉರುಳಿ ಬಿದ್ದಿದೆ. ಅದರಲ್ಲಿ 76 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಇದ್ದರು.
ಡೆಲ್ಟಾ ಏರ್‌ಲೈನ್ಸ್ ವಿಮಾನ 4819, ಮಿನ್ನಿಯಾಪೋಲಿಸ್‌ನ ಸೇಂಟ್ ಪಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಒಂಟಾರಿಯೊದ ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ವಿಮಾನದಲ್ಲಿದ್ದ ಎಲ್ಲಾ 80 ಜನರನ್ನು ಸ್ಥಳಾಂತರಿಸಲಾಯಿತು. ಆದರೆ, ಒಂದು ಮಗು ಸೇರಿದಂತೆ ಕನಿಷ್ಠ 15 ಜನರು ಅಪಘಾತದಲ್ಲಿ ಗಾಯಗೊಂಡರು ಮತ್ತು ಇಬ್ಬರು ಜನರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
Toronto Pearson is aware of an incident upon landing involving a Delta Airlines plane arriving from Minneapolis. Emergency teams are responding. All passengers and crew are accounted for.
— Toronto Pearson (@TorontoPearson) February 17, 2025
I’m closely following the serious incident at the Pearson Airport involving Delta Airlines flight 4819 from Minneapolis. All 80 passengers onboard are accounted for. Updates will follow.
— Anita Anand (@AnitaAnandMP) February 17, 2025