ದೆಹಲಿ ಬೆನ್ನಲ್ಲೇ ಬಿಹಾರದಲ್ಲೂ ಪ್ರಬಲ ಭೂಕಂಪ ಸಂಭವಿಸಿದ್ದು, 4.0 ತೀವ್ರತೆ ದಾಖಲಾಗಿದೆ.
ಸೋಮವಾರ ಬೆಳಿಗ್ಗೆ 08.02 ಕ್ಕೆ ಬಿಹಾರದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ರಾಜ್ಯದ ಸಿವಾನ್ನಲ್ಲಿ ಭೂಕಂಪನದ ಅನುಭವವಾಗಿದೆ.ಭೂಕಂಪದ ಕೇಂದ್ರ ಬಿಂದು 10 ಕಿ.ಮೀ ಆಳದಲ್ಲಿತ್ತು ಎಂದು ಅದು ಹೇಳಿದೆ. ಭೂಕಂಪದಿಂದಾಗಿ ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ತಕ್ಷಣದ ವರದಿಗಳಿಲ್ಲ.
ಬೆಳಿಗ್ಗೆ 5.36 ಕ್ಕೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 4.0 ತೀವ್ರತೆಯ ಭೂಕಂಪನ ಸಂಭವಿಸಿದ ಕೆಲವೇ ಗಂಟೆಗಳ ನಂತರ ಬಿಹಾರದಲ್ಲಿ ನಡುಕ ಉಂಟಾಗಿದೆ.
EQ of M: 4.0, On: 17/02/2025 08:02:08 IST, Lat: 25.93 N, Long: 84.42 E, Depth: 10 Km, Location: Siwan, Bihar.
For more information Download the BhooKamp App https://t.co/5gCOtjdtw0 @DrJitendraSingh @OfficeOfDrJS @Ravi_MoES @Dr_Mishra1966 @ndmaindia pic.twitter.com/nw8POEed0M— National Center for Seismology (@NCS_Earthquake) February 17, 2025