
ಚಿಕ್ಕಮಗಳೂರು: ಸುತ್ತಿಗೆಯಿಂದ ಹೊಡೆದು ಅತ್ತೆಯನ್ನೇ ಅಳಿಯ ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದ ಬಣಕಲ್ ಹೋಬಳಿಯ ಭಾರತಿ ಬೈಲು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಯಮುನಾ(65) ಕೊಲೆಯಾದ ಮಹಿಳೆ. ಅವರ ಅಳಿಯ ಶಶಿಧರ್ ಕೊಲೆ ಆರೋಪಿಯಾಗಿದ್ದಾನೆ. ಜಗಳದ ವೇಳೆ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಬಣಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.