ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಜೈಲಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಜೈಲಿನಿಂದ ಬಿಡುಗಡೆಯಾದ ಖೈದಿಯೊಬ್ಬ ಜೈಲಿನ ಗೇಟ್‌ನಲ್ಲೇ ಕುಣಿದು ಸಂಭ್ರಮಿಸಿದ್ದಾನೆ. ಈ ದೃಶ್ಯವನ್ನು ಕಂಡ ಜೈಲಿನ ಸಿಬ್ಬಂದಿ ಕೂಡಾ ಚಪ್ಪಾಳೆ ತಟ್ಟಿ ಅವನನ್ನು ಹುರಿದುಂಬಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಿವಾ ನಾಗರ್ ಎಂಬ ಖೈದಿಯನ್ನು ಮಾದಕ ವಸ್ತು ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿತ್ತು. ನ್ಯಾಯಾಲಯವು ಅವನಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂಪಾಯಿ ದಂಡ ವಿಧಿಸಿತ್ತು. ಅನಾಥನಾಗಿದ್ದರಿಂದ ಶಿವಾ ನಾಗರ್ ಗೆ ದಂಡವನ್ನು ಪಾವತಿಸಲು ಯಾರೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅವನ ಬಿಡುಗಡೆ ವಿಳಂಬವಾಗಿತ್ತು.
ಈ ವಿಷಯವನ್ನು ತಿಳಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು (DLSA) ಸ್ವಯಂಸೇವಾ ಸಂಸ್ಥೆಯ ನೆರವಿನಿಂದ ಶಿವಾ ಅವರ ದಂಡವನ್ನು ಪಾವತಿಸಿದ್ದು, ಇದರಿಂದ ಅವನ ಬಿಡುಗಡೆ ಸಾಧ್ಯವಾಯಿತು.
ಜೈಲಿನಿಂದ ಹೊರಬಂದ ಕೂಡಲೇ ಶಿವಾ ಕುಣಿಯಲು ಪ್ರಾರಂಭಿಸಿದ್ದು, ಅವನ ಉತ್ಸಾಹವನ್ನು ಕಂಡು ಜೈಲಿನ ಸಿಬ್ಬಂದಿ ಮತ್ತು ವಕೀಲರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಜೈಲಿನಲ್ಲಿರುವಾಗ ಓದಲು ಮತ್ತು ಬರೆಯಲು ಕಲಿತಿದ್ದೇನೆಂದೂ, ಈಗ ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಬದ್ಧನಾಗಿದ್ದೇನೆಂದೂ ಶಿವಾ ಮಾಧ್ಯಮಕ್ಕೆ ತಿಳಿಸಿದ್ದಾನೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಅವರ ಸಂತೋಷ ಮತ್ತು ಜೈಲು ಸಿಬ್ಬಂದಿಯ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಶ್ಲಾಘಿಸುತ್ತಿದ್ದಾರೆ.
“9 महीने से जेल में बन्द था” जुर्माने के 1 हजार रुपये अदा न कर पाने के कारण रिहा नहीं हो पाया था !!
यूपी के कन्नौज जिला जेल से रिहा होते ही बंदी ने जेल गेट पर किया डांस, जेल स्टाफ ने बजाई तालियां !!
एक छिबरामऊ का तो दूसरा फतेहपुर का निवासी है !!#viralvideo @Kannaujpolice1… pic.twitter.com/CFEgFGMV22
— MANOJ SHARMA LUCKNOW UP🇮🇳🇮🇳🇮🇳 (@ManojSh28986262) February 15, 2025