ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, 26 ವರ್ಷದ ಯುವಕನೊಬ್ಬ ತನ್ನ ಮದುವೆ ಮೆರವಣಿಗೆಯಲ್ಲಿ ಕುದುರೆಯ ಮೇಲೆ ಕುಳಿತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ವರನ ಕೊನೆಯ ಕ್ಷಣಗಳನ್ನು ಸೆರೆಹಿಡಿದ ವೀಡಿಯೊ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಮತ್ತು ವಿಡಿಯೋ ಭಾರಿ ವೈರಲ್ ಆಗಿದೆ.
ಮೃತರನ್ನು ಕಾಂಗ್ರೆಸ್ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾದ (ಎನ್ಎಸ್ಯುಐ) ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಜಾಟ್ ಎಂದು ಗುರುತಿಸಲಾಗಿದೆ. ವರನ ದುರದೃಷ್ಟಕರ ಸಾವಿನ ಬಗ್ಗೆ ವಿವರಗಳನ್ನು ನೀಡಿದ ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಆರ್.ಬಿ.ಗೋಯಲ್, ಕುಟುಂಬ ಸದಸ್ಯರು ಜಾಟ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕಂಡು ಹೋದರು. ಆದರೆ ಆ ವೇಳೆಗೆ ಅವರು ಅದಾಗಲೇ ಮೃತಪಟ್ಟಿದ್ದರು ಎಂದು ಹೇಳಿದರು. ವರ ಶಿಯೋಪುರದ ಸೂನ್ಸ್ವಾಡಾ ಗ್ರಾಮದ ನಿವಾಸಿಯಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಅವರು ಹೇಳಿದರು. ಆಘಾತಕಾರಿ ವೀಡಿಯೊದಲ್ಲಿ ಸಾಂಪ್ರದಾಯಿಕ ಉಡುಪನ್ನು ಧರಿಸಿದ ಜಾಟ್ ಕುದುರೆಯ ಮೇಲೆ ವೇದಿಕೆಯ ಕಡೆಗೆ ಹೋಗುವುದನ್ನು ತೋರಿಸುತ್ತದೆ.ಅವನು ನಿಧಾನವಾಗಿ ಮುಂದೆ ಬಾಗಿ ಒಂದೇ ಕಡೆ ವಾಲುತ್ತಾನೆ. . ಒಬ್ಬ ಸಂಬಂಧಿ ಅವನನ್ನು ಕುದುರೆಯಿಂದ ಕೆಳಗಿಳಿಸಲು ಪ್ರಯತ್ನಿಸುತ್ತಾನೆ ಆದರೆ ಜಾಟ್ ಅದಕ್ಕೂ ಮೊದಲು ಕುಸಿದು ಬೀಳುತ್ತಾನೆ. ದುರಂತ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
मध्यप्रदेश: श्योपुर जिले में एक हैरान कर देने वाली घटना सामने आई। शादी के दौरान घोड़ी पर सवार एक दूल्हे की मौत हो गई
मौत से पहले दूल्हे ने बरातियों के साथ जमकर डांस भी किया दुल्हन स्टेज पर दूल्हे का इंतजार करती रही लेकिन दूल्हे के आने से पहले उसकी मौत की खबर आ गई।#heartattack pic.twitter.com/SvIA4tq7Fd— Raajeev Chopra (@Raajeev_Chopra) February 15, 2025