alex Certify SHOCKING: ಆಸ್ತಿ ವಿವಾದ ಹಿನ್ನೆಲೆ ಸುತ್ತಿಗೆಯಿಂದ ಹೊಡೆದು ತಂದೆ, ತಾಯಿ ಹತ್ಯೆಗೈದ ಪಾಪಿ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಆಸ್ತಿ ವಿವಾದ ಹಿನ್ನೆಲೆ ಸುತ್ತಿಗೆಯಿಂದ ಹೊಡೆದು ತಂದೆ, ತಾಯಿ ಹತ್ಯೆಗೈದ ಪಾಪಿ ಪುತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಆಸ್ತಿ ವಿವಾದ ಹಿನ್ನಲೆಯಲ್ಲಿ ಮಗನೊಬ್ಬ ತನ್ನ ತಾಯಿ ಮತ್ತು ತಂದೆಯನ್ನು ಕೊಂದಿದ್ದಾನೆ. ಇಬ್ಬರನ್ನೂ ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ.

ರಾಜ್ಯ ರಾಜಧಾನಿಯ ಮೋಹನಲಾಲ್‌ಗಂಜ್ ಪ್ರದೇಶದಲ್ಲಿ ನಡೆದಿದೆ. ನಂತರ, ಸಿಸಿಟಿವಿ ದೃಶ್ಯಗಳ ಸಹಾಯದಿಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮಗನಿಗೆ ತನ್ನ ಪೋಷಕರೊಂದಿಗೆ ಆಸ್ತಿ ವಿವಾದವಿತ್ತು. ಆಗಾಗ ಜಗಳವಾಡುತ್ತಿದ್ದ ಅವನು ತಾಳ್ಮೆ ಕಳೆದುಕೊಂಡು ಸುತ್ತಿಗೆಯಿಂದ ಅವರ ಮೇಲೆ ಹಲ್ಲೆ ಮಾಡಿದನು. ಅವನ ಹೆಂಡತಿ ಮತ್ತು ಸಹೋದರ ಅವನನ್ನು ತಡೆಯಲು ಪ್ರಯತ್ನಿಸಿದರೂ, ಹಲವು ಬಾರಿ ಹೊಡೆದಿದ್ದಾನೆ. ಇದರಿಂದಾಗಿ ಇಬ್ಬರೂ ಮೃತಪಟ್ಟಿದ್ದಾರೆ. ಘಟನೆಯ ನಂತರ ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದ.

ಆರೋಪಿಯು ತನ್ನ ಹೆಂಡತಿಯೊಂದಿಗೆ ತಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದನು. ಅವನ ಕಿರಿಯ ಸಹೋದರ ಕೂಡ ಅವರೊಂದಿಗೆ ವಾಸಿಸುತ್ತಿದ್ದನು. ಆಸ್ತಿ ಕಾರಣದಿಂದ ಪೋಷಕರನ್ನು ಕೊಲೆ ಮಾಡಿದ್ದಾನೆ. ನೆರೆಹೊರೆಯವರು ಮತ್ತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿ ಸ್ಥಳದಿಂದ ಓಡಿಹೋಗುತ್ತಿರುವುದು ಕಂಡುಬಂದಿದೆ. ನಂತರ, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...