ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಒಬ್ಬ ವ್ಯಕ್ತಿ ಪಂಕ್ತಿ ಭೋಜನದಲ್ಲಿ ಕುಳಿತುಕೊಂಡು ಊಟ ಮಾಡುತ್ತಿದ್ದಾನೆ. ಆದರೆ ಆತ ಊಟ ಮಾಡುವಾಗ ಇದ್ದಕ್ಕಿದ್ದಂತೆ ಜೋಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡಿದ್ದು, ಅದು ಡೆಲಿವರಿ ಕೂಡಾ ಆಗಿದೆ.
ಅದನ್ನು ನೋಡಿದವರೆಲ್ಲಾ ಆಶ್ಚರ್ಯಚಕಿತರಾಗಿದ್ದಾರೆ. ಕೆಲವರು “ಇವನೇನಪ್ಪಾ ಇಷ್ಟು ವಿಚಿತ್ರವಾಗಿ ಮಾಡ್ತಿದ್ದಾನೆ” ಎಂದುಕೊಂಡರೆ, ಇನ್ನು ಕೆಲವರು “ಇಂಥ ಐಡಿಯಾಗಳು ಹೇಗೆ ಬರ್ತಾವಪ್ಪಾ” ಎಂದು ತಲೆ ಕೆಡಿಸಿಕೊಂಡಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನರು ಇದನ್ನು ನೋಡಿ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಈ ವಿಡಿಯೋವನ್ನು ಇಲ್ಲಿಯವರೆಗೆ 6900 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ ಮತ್ತು 5.77 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ.
India is not for beginners , Bhandara mein Zomato se order kar dia bhai pic.twitter.com/mAditnAiGh
— Vishal (@VishalMalvi_) February 13, 2025