ನವದೆಹಲಿ: ನವದೆಹಲಿ ರೈಲು ನಿಲ್ದಾಣದಲ್ಲಿ 14 ಮತ್ತು 15ನೇ ಪ್ಲಾಟ್‌ಫಾರ್ಮ್‌ನಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಮೂವರು ಮಕ್ಕಳು ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ.
ಭಾರೀ ಜನಸಂದಣಿಯನ್ನು ಪರಿಗಣಿಸಿ, ನಾಲ್ಕು ಹೆಚ್ಚುವರಿ ರೈಲುಗಳನ್ನು ಘೋಷಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ.ಕಾಲ್ತುಳಿತದ ಕಾರಣವನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಇಬ್ಬರು ಸದಸ್ಯರ ವಿಚಾರಣೆಗೆ ಆದೇಶಿಸಿದೆ.
ಸಾವು ಕಂಡವರನ್ನು ಆಹಾ ದೇವಿ(79), ಪಿಂಕಿ ದೇವಿ(41), ಶೀಲಾ ದೇವಿ(50), ವ್ಯೋಮ್(25), ಪೂನಂ ದೇವಿ(40), ಲಲಿತಾ ದೇವಿ(35), ಸುರುಚಿ(11), ಕೃಷ್ಣ ದೇವಿ(40), ವಿಜಯ್ ಸಾಹ್(15), ನೀರಜ್(12), ಶಾಂತಿ ದೇವಿ(40), ಪೂಜಾ ಕುಮಾರ್(8), ಸಂಗೀತಾ ಮಲಿಕ್, ಪೂನಂ ಇಬ್ಬರೂ 34 ವರ್ಷ, ಮಮತಾ ಝಾ(40), ರಿಯಾ ಸಿಂಗ್(7) ಬೇಬಿ ಕುಮಾರಿ(24) ಮತ್ತು ಮನೋಜ್(47) ಎಂದು ಗುರುತಿಸಲಾಗಿದೆ.
ಪರಿಹಾರ ಘೋಷಣೆ
ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಹತ್ತಿರದ ಸಂಬಂಧಿಕರಿಗೆ ಸರ್ಕಾರ 10 ಲಕ್ಷ ರೂಪಾಯಿಗಳ ಪರಿಹಾರವನ್ನು ರೈಲ್ವೇ ಘೋಷಿಸಿದೆ. ಇದಲ್ಲದೆ, ಗಾಯಾಳುಗಳಿಗೆ 2.5 ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 1 ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ.
Rs 10 lakh compensation has been announced to the families of the deceased who lost their lives in the New Delhi Railway Station stampede yesterday. Rs 2.5 lakh compensation to the seriously injured and Rs 1 lakh to the minor injured: Indian Railways
— ANI (@ANI) February 16, 2025