
ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಾಣಸಿಗುವ ಮುಳ್ಳಯ್ಯನ ಗಿರಿ ಎತ್ತರದ ಪರ್ವತವಾಗಿದೆ. ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳಂತೆ ಅತ್ಯಂತ ಎತ್ತರದ ಪರ್ವತ ಇದಾಗಿದ್ದು, ಬೆಟ್ಟದ ಮೇಲೆ ಮಠವಿದೆ.
ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಸುಮಾರು 18 ಕಿಲೋ ಮೀಟರ್ ದೂರದಲ್ಲಿರುವ ಮುಳ್ಳಯ್ಯನಗಿರಿ ಚಾರಣಿಗರ ಸ್ವರ್ಗವೆನಿಸಿದೆ.
ಸಮುದ್ರ ಮಟ್ಟದಿಂದ ಸುಮಾರು 1926 ಮೀಟರ್ ಎತ್ತರದಲ್ಲಿರುವ ಈ ಪ್ರದೇಶದ ಸೌಂದರ್ಯ ಮಳೆಗಾಲದಲ್ಲಿ ಹೆಚ್ಚಾಗುತ್ತದೆ. ಪ್ರತಿ 20 ನಿಮಿಷಕ್ಕೊಮ್ಮೆ ಬದಲಾಗುವ ಇಲ್ಲಿನ ವಾತಾವರಣ ಪ್ರವಾಸಿಗರಿಗೆ ಹೊಸತೊಂದು ಅನುಭವ ನೀಡುತ್ತದೆ.
ಕಣ್ಮನ ಸೆಳೆಯುವ ರಾಜಸ್ತಾನದ ಪ್ರಮುಖ ಪ್ರವಾಸಿ ತಾಣಗಳು
ಚಳಿ, ಮಳೆ, ಮಂಜಿನಾಟದಲ್ಲಿ ಕೈಗೆಟುಕುವ ಮೋಡಗಳ ಸಾಲು, ಕಾಫಿ ತೋಟಗಳು, ಹಸಿರು ಹೊದ್ದ ಬೆಟ್ಟಗಳು, ಕಾಡಿನ ಅಂದ ವಾರಾಂತ್ಯದ ಪ್ರವಾಸಕ್ಕೆ ಬರುವವರ ಮನಸ್ಸಿಗೆ ಮುದ ನೀಡುತ್ತವೆ.
ಇಲ್ಲಿನ ದೃಶ್ಯಗಳು ಮತ್ತೆ, ಮತ್ತೆ ನೋಡಬೇಕೆನಿಸುತ್ತವೆ. ಸದಾ ಕೆಲಸದ ಒತ್ತಡದಿಂದ ಇರುವವರು ಒಮ್ಮೆ ಇಲ್ಲಿಗೆ ಭೇಟಿ ನೀಡಿ ಹಾಯಾಗಿ ಕಾಲಕಳೆಯಬಹುದು. ಒತ್ತಡವನ್ನು ಮರೆಯಬಹುದಾಗಿದೆ.