ಮಹಾ ಕುಂಭಮೇಳಕ್ಕೆ ಭೇಟಿ ನೀಡಲು ಬಯಸುವ ಭಕ್ತರ ಅನುಕೂಲಕ್ಕಾಗಿ ಉತ್ತರ ರೈಲ್ವೆ ಫೆಬ್ರವರಿ 15, 16 ಮತ್ತು 17 ರಂದು ನವದೆಹಲಿ ಮತ್ತು ವಾರಣಾಸಿ ನಡುವೆ (ಪ್ರಯಾಗ್ರಾಜ್ ಮೂಲಕ) ವಂದೇ ಭಾರತ್ ವಿಶೇಷ ರೈಲು ಸಂಖ್ಯೆ 02252/02251 ಅನ್ನು ಓಡಿಸಲಿದೆ.
ವಂದೇ ಭಾರತ್ ವಿಶೇಷ ರೈಲು ಸಂಖ್ಯೆ 02252 ನವದೆಹಲಿಯಿಂದ ಬೆಳಿಗ್ಗೆ 5.30 ಕ್ಕೆ (ಪ್ರಯಾಗ್ರಾಜ್ ಮೂಲಕ 12.00 ಗಂಟೆಗೆ) ಹೊರಟು 14.20 ಗಂಟೆಗೆ ವಾರಣಾಸಿಯನ್ನು ತಲುಪಲಿದೆ ಎಂದು ಉತ್ತರ ರೈಲ್ವೆ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರೈಲು ಸಂಖ್ಯೆ 02251 ವಾರಣಾಸಿಯಿಂದ 15:15 ಗಂಟೆಗೆ (ಪ್ರಯಾಗ್ರಾಜ್ನಿಂದ 17.20 ಗಂಟೆಗೆ) ಹೊರಟು ಅದೇ ದಿನ 23.50 ಗಂಟೆಗೆ ನವದೆಹಲಿಯನ್ನು ತಲುಪಲಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಿಮಾಂಶು ಶೇಖರ್ ಉಪಾಧ್ಯಾಯ ತಿಳಿಸಿದ್ದಾರೆ.ವಾರಾಂತ್ಯದಲ್ಲಿ ಕುಂಭಮೇಳಕ್ಕೆ ಜನಸಂದಣಿಯನ್ನು ನಿರೀಕ್ಷಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.