
ಮೈಸೂರು: ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಲಂಚ ಸ್ವೀಕರಿಸುತ್ತಿದ್ದ ಪಿಎಸ್ಐ ಲೋಕಾಯುಕ್ತ ಬಲೆ ಬಿದ್ದಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಠಾಣೆ ಪಿಎಸ್ಐ ಶಿವಶಂಕರ್ ಬಲೆಗೆ ಬಿದ್ದವರು.
ಶಿವಶಂಕರ್ 80 ಸಾವಿರ ರೂ. ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಟ್ಟದಪುರ ಠಾಣೆ ಪಿಎಸ್ಐ ಶಿವಶಂಕರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಪಿಎಸ್ಐ ಶಿವಶಂಕರ್ ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. 80 ಸಾವಿರ ರೂಪಾಯಿ ಹಣ ಪಡೆಯುವ ವೇಳೆ ಪಿಎಸ್ಐ ಶಿವಶಂಕರ್ ಸಿಕ್ಕಿ ಬಿದ್ದಿದ್ದಾರೆ.