ಕಾನ್ಪುರದ ಒಂದು ಧಾಬಾದಲ್ಲಿನ ಆಘಾತಕಾರಿ ವಿಡಿಯೋವೊಂದು ಆಹಾರ ಶುಚಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಹಾ ಕುಂಭಕ್ಕೆ ಪ್ರಯಾಗ್ರಾಜ್ಗೆ ತೆರಳುತ್ತಿದ್ದ ಪ್ರವಾಸಿಗರೊಬ್ಬರು ಸೆರೆಹಿಡಿದ ದೃಶ್ಯಾವಳಿಯಲ್ಲಿ, ರಸ್ತೆ ಬದಿಯ ಧಾಬಾದಲ್ಲಿ ಬಾಣಸಿಗನೊಬ್ಬ ಗೋಧಿ ಹಿಟ್ಟನ್ನು ಕಲುಷಿತ ನೀರಿನಿಂದ ಕಲಸುತ್ತಿರುವುದು ಕಂಡುಬಂದಿದೆ. ಅರಿವಿಲ್ಲದ ಗ್ರಾಹಕರು ಅದೇ ಆಹಾರವನ್ನು ಸೇವಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಪ್ರಯಾಗ್ರಾಜ್ಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಚಿತ್ರೀಕರಿಸಿದ್ದು, “ಇದು ಹೋಟೆಲ್ನ ರೊಟ್ಟಿ. ಬಾಣಸಿಗ ಹಿಟ್ಟನ್ನು ಹೇಗೆ ಕಲಸುತ್ತಿದ್ದಾನೆಂದು ನೋಡಿ, ಆದರೆ ನೀರನ್ನು ಎಲ್ಲಿಂದ ತರುತ್ತಿದ್ದಾನೆಂದು ಗಮನಿಸಿ. ಅದು ಎಷ್ಟು ಕೊಳಕಾಗಿದೆ ಮತ್ತು ಜನರು ಹೋಟೆಲ್ನಲ್ಲಿ ಕುಳಿತು ತಿನ್ನುತ್ತಿದ್ದಾರೆ” ಎಂದು ಹೇಳಿದ್ದಾರೆ.
ಬಳಿಕ ಅವರು ಬಾಣಸಿಗನನ್ನು ಪ್ರಶ್ನಿಸಿ, “ಹಿಟ್ಟು ಕಲಸಲು ಈ ನೀರನ್ನು ಏಕೆ ಬಳಸುತ್ತೀರಿ ? ಇದು ಸರಿಯಲ್ಲ. ಜನರು ನಿಮ್ಮನ್ನು ನಂಬಿ ನಿಮ್ಮ ಹೋಟೆಲ್ಗೆ ಬರುತ್ತಾರೆ, ಹೀಗೆ ಮಾಡುವುದು ಸರಿಯಲ್ಲ. ಜನರು ಹಣ ಪಾವತಿಸುತ್ತಾರೆ, ಸರಿ ತಾನೆ ?” ಎಂದು ಕೇಳಿದ್ದಾರೆ.
ವಿಡಿಯೋದಲ್ಲಿ ಬಾಣಸಿಗನ ಸುತ್ತಲಿನ ಪ್ರದೇಶವು ತುಂಬಾ ಕೊಳಕಾಗಿ ಕಾಣುತ್ತದೆ. ಈ ಸ್ಥಿತಿಯಲ್ಲೇ ಅವನು ಹಿಟ್ಟನ್ನು ಕಲಸುವುದನ್ನು ಮುಂದುವರೆಸಿದ್ದಾರೆ.
View this post on Instagram