alex Certify ‘ಪ್ರೇಮಿಗಳ ದಿನ’ವನ್ನು ಇಂದು ಏಕೆ ಆಚರಿಸುತ್ತಾರೆ.? ಇದರ ಇತಿಹಾಸ ತಿಳಿಯಿರಿ |Valentine’s Day | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪ್ರೇಮಿಗಳ ದಿನ’ವನ್ನು ಇಂದು ಏಕೆ ಆಚರಿಸುತ್ತಾರೆ.? ಇದರ ಇತಿಹಾಸ ತಿಳಿಯಿರಿ |Valentine’s Day

ಇಂದಿನ ವೇಗದ ಜಗತ್ತಿನಲ್ಲಿ ನಮ್ಮ ಪ್ರೀತಿಪಾತ್ರರನ್ನು ಭೇಟಿ ಮಾಡಲು ನಮಗೆ ಸಮಯ ಸಿಗುವುದಿಲ್ಲ. ಹೀಗಾಗಿ ವ್ಯಾಲೆಂಟೈನ್ಸ್ ಡೇ ಕ್ಷಣವು ಪ್ರೀತಿ ಮತ್ತು ಬಾಂಧವ್ಯದ ಸಿಹಿಯನ್ನು ಅನುಭವಿಸುವಂತೆ ಮಾಡುತ್ತದೆ.ಪ್ರೇಮಿಗಳ ದಿನವನ್ನು ಪ್ರೇಮಿಗಳಿಗೆ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಪ್ರೇಮಿಗಳ ದಿನದಂದು ಜನರು ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಪ್ರೇಮಿಗಳ ದಿನಾಚರಣೆ ಫೆಬ್ರವರಿ 7 ರಿಂದ ಆರಂಭವಾಗಿದ್ದು, ಅದರಲ್ಲಿ ಅತ್ಯಂತ ವಿಶೇಷ ದಿನ ಫೆಬ್ರವರಿ 14 ಮಾತ್ರ.

ನೋಡಲು ಪಾಶ್ಚಾತ್ಯ ಸಂಸ್ಕೃತಿ ಎನಿಸಿದರೂ ಕೂಡ ಪ್ರೀತಿಯನ್ನು ಅನುಭವಿಸಲು ಮತ್ತು ಆಚರಿಸಲು ಈ ದಿನ ಪ್ರೇಮಿಗಳಿಗಾಗಿ ಮೀಸಲಾಗಿದೆ. ಸಿಂಗಲ್ ಆಗಿರುವವರು ಕೂಡ ಯಾರ ಜೊತೆಯಾದರೂ ಮಿಂಚಬೇಕು ಎಂದು ಇದೇ ದಿನವನ್ನು ಕಾದು ನೋಡುತ್ತಿರುತ್ತಾರೆ. ಇನ್ನು ಕೆಲವರು ಈ ದಿನದಂದು ತಮ್ಮ ಬಗ್ಗೆ ಕಾಳಜಿ ವಹಿಸಿ ತಾವು ಮಾಡುವ ಕೆಲಸಗಳ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಒಟ್ಟಿನಲ್ಲಿ ವ್ಯಾಲೆಂಟೈನ್ಸ್ ಡೇ ಎಂದರೆ ಪ್ರೀತಿ, ಪ್ರೇಮ, ಕಾಳಜಿ, ನಂಬಿಕೆ ವಿಶ್ವಾಸ.

ಪ್ರೀತಿ ಯಾರಿಗೆ ಯಾವಾಗ ಬೇಕಾದರೂ ಹುಟ್ಟಬಹುದು. ಕೆಲವರಿಗೆ ದೇಹ ಸೌಂದರ್ಯ ಇಷ್ಟ. ಇನ್ನು ಕೆಲವರು ಅವರ ಗುಣಕ್ಕೆ ಆಕರ್ಷಿತರಾಗುತ್ತಾರೆ, ಅದು ಹುಡುಗ ಆಗಿರಬಹುದು… ಹುಡುಗಿಯೂ ಆಗಿರಬಹುದು. ಕೆಲವರು ಪ್ರೀತಿಯನ್ನು ಬಾಯ್ಬಿಟ್ಟು ಹೇಳಿದ್ರೆ, ಇನ್ನೂ ಕೆಲವರು ಪ್ರೀತಿಗೆ ಕಣ್‌ಸನ್ನೆಯ ನೋಟವೇ ಸಾಕು ಎನ್ನುತ್ತಾರೆ. ಇಂತಹ ಪ್ರೇಮಿಗಳಿಗೂ ತಮ್ಮ ಸಿಹಿ-ಕಹಿ ನೆನಪುಗಳನ್ನು ಅಚರಿಸಿಕೊಳ್ಳಲು ಒಂದು ದಿನ ಬೇಕಲ್ಲವೇ ಅದುವೇ ವ್ಯಾಲೆಂಟೆನ್ಸ್ ಡೇ.

ಅದೆಷ್ಟೋ ಪ್ರೇಮಿಗಳಿಗೆ ಈಗಲೂ ಕಾಯೆ ಫೆ.14ರ ದಿನವನ್ನು ವ್ಯಾಲೇಂಟಿನ್ ಡೇ ಎಂದು ಆಚರಿಸುತ್ತಾರೆ ಅಂತ ಗೊತ್ತೇ ಇಲ್ಲ. ಯಾಕೆ ಪ್ರೇಮಿಗಳ ದಿನ ಫೆಬ್ರವರಿ 14ಕ್ಕೆ ಆಚರಿಸುತ್ತಾರೆ ಎಂದರೆ ಕ್ರಿ.ಶ.270ರಲ್ಲಿ 2ನೇ ಕ್ಲಾಡಿಯಸ್‌ನ ಕಾಲದಲ್ಲಿ ಜಾರಿಗೆ ಬಂದಿತು. ಕ್ಲಾಡಿಯಸ್‌ಗೆ ತಮ್ಮ ಯುವಕರು ಯುದ್ಧದ ಸಂದರ್ಭದಲ್ಲಿ ಮದುವೆಯಾಗುವುದು ಇಷ್ಟವಿರಲಿಲ್ಲ. ಏಕೆಂದರೆ ಆತನ ಪ್ರಕಾರ ಯುವಕರು ಮದುವೆಯಾಗದೇ ಒಂಟಿಯಾಗಿದ್ದಷ್ಟೂ ಯುದ್ಧದಲ್ಲಿ ಉತ್ತಮ ರೀತಿಯಲ್ಲಿ ಹೋರಾಡುತ್ತಾರೆ ಎಂಬ ಭಾವನೆಯಾಗಿತ್ತು.

ಹೀಗಿದ್ದಾಗ ಬಿಷಪ್ ವ್ಯಾಲೇಂಟಿನ್ ಕ್ಲಾಡಿಯಸ್‌ನ ಈ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿದ್ದನು. ಆತನು ಮದುವೆಯಾಗಲು ಇಚ್ಛಿಸುವವರನ್ನು ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ. ಈ ಅಪರಾಧಕ್ಕಾಗಿ ಅವನನ್ನು ಫೆ.14ರಂದು ಸೆರೆಮನೆಗೆ ತಳ್ಳಲಾಯಿತು. ಈ ಬಿಷಪ್ ತನ್ನ ಸಾವಿಗೆ ಮೊದಲು ಇಂತಿ ನಿಮ್ಮ ವ್ಯಾಲೇಂಟಿನ್ ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ಬರೆದು ಮೃತಪಟ್ಟರು. ಅಂದಿನಿಂದ ಪ್ರತಿ ವರ್ಷದ ಫೆ.14ರ ದಿನವನ್ನು ವ್ಯಾಲೇಂಟಿನ್ಸ್ ಡೇ ಪ್ರೇಮಿಗಳ ದಿನ ಎಂದು ಆಚರಣೆ ಮಾಡುತ್ತಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...