ಸೂಪರ್ ಮಾರ್ಕೆಟ್ ಗೆ ಬಂದಿದ್ದ ಮಹಿಳೆಯ ಜೇಬಿನಲ್ಲಿದ್ದ ಮೊಬೈಲ್ ಏಕಾಏಕಿ ಸ್ಪೋಟಗೊಂಡು ಬೆಂಕಿ ತಗುಲಿದ ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.
ಬ್ರೆಜಿಲ್ ನಲ್ಲಿ ಈ ಘಟನೆ ನಡೆದಿದ ಎನ್ನಲಾಗಿದೆ. ಹಿಂಭಾಗದ ಜೇಬಿನಲ್ಲಿ ಮೊಬೈಲ್ ಸ್ಫೋಟಗೊಂಡಿದೆ. ಮಹಿಳೆ ಬ್ರೆಜಿಲ್ನ ಅನಾಪೊಲಿಸ್ ಪ್ರದೇಶದ ಸೂಪರ್ಮಾರ್ಕೆಟ್ನಲ್ಲಿದ್ದಾಗ ಇದ್ದಕ್ಕಿದ್ದಂತೆ ಡೆನಿಮ್ ಪ್ಯಾಂಟ್ನಿಂದ ಹೊಗೆ ಹೊರಬಂದಿತು. ಮಾರ್ಟ್ನಲ್ಲಿ ಆಕೆಯ ಪಕ್ಕದಲ್ಲಿ ನಿಂತಿದ್ದ ಆಕೆಯ ಪತಿ ಮೊಬೈಲ್ಗೆ ಬೆಂಕಿ ತಗುಲಿದ್ದನ್ನು ನೋಡಿ ಆಘಾತಕ್ಕೊಳಗಾಗಿದ್ದಾನೆ.ನಂತರ ಬೆಂಕಿ ನಂದಿಸಲು ಯತ್ನಿಸಿದ್ದಾನೆ. ಘಟನೆಯಲ್ಲಿ ಯುವತಿಗೆ ಸುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಸೂಪರ್ಮಾರ್ಕೆಟ್’ನ ಸಿಸಿಟಿವಿಯಲ್ಲಿ ಘಟನೆಯ ದೃಶ್ಯಾವಳಿಗಳು ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ, ಮಹಿಳೆ ಮೊಟೊರೊಲಾ ಮೋಟೋ ಇ 32 ಅನ್ನು ಬಳಸುತ್ತಿದ್ದಳು, ಅದು ಅವಳ ಹಿಂಭಾಗದ ಜೇಬಿನಲ್ಲಿ ಸ್ಫೋಟಗೊಂಡು ಜೀನ್ಸ್ಗೆ ಬೆಂಕಿ ಹಚ್ಚಿತು.
🇧🇷 PHONE EXPLODES IN SUPERMARKET, LEAVES WOMAN SEVERELY BURNED (NOT MADE IN ISRAEL)
A woman suffered 2nd and 3rd-degree burns when her cell phone exploded in her back pocket while she was grocery shopping in Anápolis, Brazil.
The phone was identified as Motorola Moto E32,… pic.twitter.com/R7XOXNZfSL
— SVS NEWS AGENCY (@svsnewsagency) February 12, 2025