ಕರಾಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿ-ರಾಷ್ಟ್ರ ಸರಣಿಯ ಪಂದ್ಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಫೀಲ್ಡಿಂಗ್ ಮಾಡುವಾಗ ಹಾಸ್ಯಾಸ್ಪದ ಎಡವಟ್ಟು ಮಾಡಿದ್ದು, ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಅವರು ಬಿದ್ದು, ದಕ್ಷಿಣ ಆಫ್ರಿಕಾಕ್ಕೆ ನಾಲ್ಕು ರನ್ ಗಳನ್ನು ಬಿಟ್ಟುಕೊಟ್ಟಿದ್ದಾರೆ.
ಚೆಂಡು ಬೌಂಡರಿ ಗೆರೆಯನ್ನು ಸಮೀಪಿಸುತ್ತಿದ್ದಂತೆ, ಶಾಹೀನ್ ಅಫ್ರಿದಿ ಅದನ್ನು ತಡೆಯಲು ಪ್ರಯತ್ನಿಸಿದರು. ಆದರೆ, ಅವರ ಪ್ರಯತ್ನ ವಿಫಲವಾಯಿತು ಮತ್ತು ಚೆಂಡು ಅವರ ದೇಹದ ಕೆಳಗೆ ಹಾದು ಬೌಂಡರಿ ಗೆರೆ ದಾಟಿತು. ಈ ಎಡವಟ್ಟಿನಿಂದಾಗಿ ದಕ್ಷಿಣ ಆಫ್ರಿಕಾಕ್ಕೆ ನಾಲ್ಕು ಪ್ರಮುಖ ರನ್ ಗಳು ಸಿಕ್ಕವು.
ಶಾಹೀನ್ ಅಫ್ರಿದಿ ಅವರ ಫೀಲ್ಡಿಂಗ್ ವೈಫಲ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನುಳಿದಂತೆ, ಶಾಹೀನ್ ಅಫ್ರಿದಿ ಈ ಪಂದ್ಯದಲ್ಲಿ ಎರಡು ವಿಕೆಟ್ ಗಳನ್ನು ಪಡೆದರು.
ದಕ್ಷಿಣ ಆಫ್ರಿಕಾದ ಬೃಹತ್ ಮೊತ್ತ
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವು ಮೊದಲು ಬ್ಯಾಟಿಂಗ್ ಮಾಡಿ 50 ಓವರ್ ಗಳಲ್ಲಿ 352 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ತಂಡದ ನಾಯಕ ತೆಂಬಾ ಬವುಮಾ 82 ರನ್ ಗಳಿಸಿದರು. ಹೆನ್ರಿಚ್ ಕ್ಲಾಸೆನ್ ಕೇವಲ 56 ಎಸೆತಗಳಲ್ಲಿ 87 ರನ್ ಸಿಡಿಸಿ ತಂಡಕ್ಕೆ ಉತ್ತಮ ಮೊತ್ತ ತಂದುಕೊಟ್ಟರು.
ರಿಜ್ವಾನ್ ಮತ್ತು ಆಘಾ ಅವರ ಅದ್ಭುತ ಜೊತೆಯಾಟ
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು ಆರಂಭದಲ್ಲಿ ಹಿನ್ನಡೆ ಕಂಡಿತ್ತು. ಆದರೆ, ಮೊಹಮ್ಮದ್ ರಿಜ್ವಾನ್ ಮತ್ತು ಸಲ್ಮಾನ್ ಅಲಿ ಆಘಾ ಅವರ ಅದ್ಭುತ ಜೊತೆಯಾಟದಿಂದ ತಂಡವು ಗೆಲುವು ಸಾಧಿಸಿದ್ದು, ರಿಜ್ವಾನ್ 122 ರನ್ ಗಳಿಸಿ ಅಜೇಯರಾಗಿ ಉಳಿದರು.
Tumble time with Shaheen Shah Afridi… #pakvsa pic.twitter.com/fixLUc75kc
— Innocent Bystander (@InnoBystander) February 12, 2025