ಬೆಂಗಳೂರು : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಟಿಕೆಟ್ ದರ ಇಳಿಸಲು ಕ್ರಮ ಕೈಗೊಳ್ಳುವುದಾಗಿ ಬಿಎಂಆರ್ ಸಿ ಎಲ್ ಎಂಡಿ ಮಹೇಶ್ವರ್ ರಾವ್ ಹೇಳಿದ್ದಾರೆ.
ಕಳೆದ 3 ದಿನಗಳಿಂದ ಬೋರ್ಡ್ ಜೊತೆ ಸಭೆ ನಡೆಸಿದ್ದೇವೆ, ಎಲ್ಲಿ ಇಳಿಕೆಯಾಗಬೇಕೋ ಅಲ್ಲಿ ಮಾಡುತ್ತೇವೆ. ಎಲ್ಲಿ ದರ ಇಳಿಕೆ ಮಾಡಲು ಸಾಧ್ಯವಿದೆಯೋ ಅಲ್ಲಿ ಇಳಿಸುತ್ತೇವೆ. ಜನಾಭಿಪ್ರಾಯದ ಮೇಲೆ ಮೆಟ್ರೋ ದರ ಇಳಿಸಲು ಕ್ರಮ ಕೈಗೊಳ್ಳುತ್ತೇವೆ. ಮೆಟ್ರೋ ದರ ಶೇ.40-45 ಹೆಚ್ಚಳವಾಗಿರುವುದರಲ್ಲಿ ಇಳಿಕೆಯಾಗಲಿದೆ. ಮೆಟ್ರೋ ಕಾರ್ಡ್ ಬಳಸುವವರಿಗೆ 5 % ಡಿಸ್ಕೌಂಟ್ ನೀಡಲಿದ್ದೇವೆ .ಮೆಟ್ರೋ ಪ್ರಯಾಣ ದರ ಸ್ಟೇಜ್ ಆಧಾರದಲ್ಲಿ ಇಳಿಕೆ ಮಾಡಲಿದ್ದೇವೆ ಎಂದು ಹೇಳಿದರು.
ಮೆಟ್ರೋ ಪ್ರಯಣ ದರ ಪರಿಷ್ಕರಣೆ ಇಲ್ಲ. ಆದರೆ ಸ್ಟೇಜ್ ಆಧಾರದಲ್ಲಿ ದರ ಇಳಿಸಲಾಗುವುದು. ಈಗಾಗಲೇ ಮೆಟ್ರೋಗೆ ಸಾಕಷ್ಟು ಬಂಡವಾಳ ಹೂಡಿಕೆ ಮಾಡಲಾಗಿದೆ. ನಮ್ಮ ಮೆಟ್ರೋ ಸಿಬ್ಬಂದಿಗೆ ವೇತನ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ದರ ಏರಿಕೆ ಮಾಡಲಾಗಿತ್ತು. ಜನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಎಲ್ಲಿ ಮೆಟ್ರೋ ಪ್ರಯಾಣ ದರ ಕಡಿಮೆ ಮಾಡಲು ಸಾಧ್ಯವೋ ಅಲ್ಲಿ ಕಡಿಮೆ ಮಾಡಲಾಗುತ್ತದೆ ಎಂದು ಹೇಳಿದರು.