ರಜತ್ ಹೆಗಡೆ ಧ್ವನಿಯಲ್ಲಿ ಮೂಡಿ ಬಂದಿರುವ ‘ಗುಲಾಬಿ ಗುಲಾಬಿ’ ಎಂಬ ಮೆಲೋಡಿ ಆಲ್ಬಮ್ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಗಾನ ಪ್ರಿಯರ ಗಮನ ಸೆಳೆದಿದೆ. ಭರತ್ ಜನಾರ್ಧನ್ ಸಂಗೀತ ಸಂಯೋಜನೆ ನೀಡಿದ್ದು, ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದಾರೆ.
ಸಚಿನ್ ರಾಥೋಡ್ ಹಾಗೂ ಆಯೇಷಾ ಈ ಹಾಡಿನ ನಾಯಕ ನಾಯಕಿಯಾಗಿದ್ದು, ಅಶೋಕ್ ರಾಥೋಡ್ ನಿರ್ದೇಶಿಸಿದ್ದಾರೆ. ಯದುವಂಶಿ ಫಿಲಂಸ್ ಸಂಸ್ಥೆ ನಿರ್ಮಾಣ ಮಾಡಿದೆ. ಎಂ ಮೋಹನ್ ರಾಜ್ ಅವರ ಸಂಕಲನ, ಹಾಗೂ ಛಾಯಾಗ್ರಹಣವಿದ್ದು ನಿರ್ದೇಶಕ ಸಚಿನ್ ರಾಥೋಡ್ ಅವರ ನೃತ್ಯ ನಿರ್ದೇಶನವಿದೆ.