ತನ್ನ ಹಾಡುಗಳ ಮೂಲಕವೇ ಗಾನಪ್ರಿಯರ ಗಮನ ಸೆಳೆದಿರುವ ಸೋಮ ವಿಜಯ್ ಅಭಿನಯದ ‘ನನಗೂ ಲವ್ವಾಗಿದೆ’ ಚಿತ್ರದ ಟ್ರೈಲರನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ. ಈ ಟ್ರೈಲರ್ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಕೆಲವೇ ಕ್ಷಣಗಳಲ್ಲಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.
ಬಿಎಸ್ ರಾಜಶೇಖರ್ ನಿರ್ದೇಶನದ ಈ ಚಿತ್ರವನ್ನು ಶ್ರೀ ಕಾಳಿ ಅಮ್ಮನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ನೀಲಕಂಠನ್ ಕೆ ನಿರ್ಮಾಣ ಮಾಡಿದ್ದು, ಬಿ ಆರ್ ಹೇಮಂತ್ ಕುಮಾರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸೋಮ ವಿಜಯ್ ಅವರಿಗೆ ಜೋಡಿಯಾಗಿ ತೇಜಸ್ವಿನಿ ಅಭಿನಯಿಸಿದ್ದು, ಅಂಜಲಿ ನಾಗರಾಜ್ ಅವರ ಛಾಯಾಗ್ರಹಣ, ಬಿ ಎಸ್ ರಾಜಶೇಖರ್ ಅವರ ಸಂಭಾಷಣೆ ಹಾಗೂ ಸುಪ್ರೀಂ ಸುಬ್ಬು ಅವರ ಸಾಹಸ ನಿರ್ದೇಶನವಿದೆ.