ಮೆಟ್ರೋ ಟಿಕೆಟ್ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಜನರ ಕೆಂಗಣ್ಣಿಗೆ BMRCL ಗುರಿಯಾಗಿತ್ತು.ಇದೀಗ ಮೆಟ್ರೋದ ದಿನದ ಪಾಸ್ 150 ರಿಂದ 300ಕ್ಕೆ ಏರಿಕೆಯಾಗಿದೆ. ಮೂರು ದಿನದ ಮೆಟ್ರೋ ಪಾಸ್ ಗೆ 350 ರಿಂದ 600 ಕ್ಕೆ ಏರಿಕೆ ಕಂಡಿದ್ದು, ಐದು ದಿನದ ಮೆಟ್ರೋ ಪಾಸ್ 550 ರಿಂದ 800ಕ್ಕೆ ಏರಿಕೆ ಮಾಡಲಾಗಿದೆ.
ಇಷ್ಟೊಂದು ದರ ಏರಿಕೆ ಮಾಡಿರೋದು ಸರಿಯಲ್ಲ ಇದರಿಂದ ಜನರಿಗೆ ಕಷ್ಟವಾಗುತ್ತದೆ, BMRCL ಪಾಸ್ ಗಳ ಹಗಲು ದರೋಡೆ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ. ಚೆನ್ನೈ ಕೊಚ್ಚಿ, ದೆಹಲಿ ಸೇರಿದಂತೆ ದೇಶದಬೇರೆ ಮಹಾನಗರಗಳಲ್ಲಿ ಮೆಟ್ರೋ ಪ್ರಯಾಣ ದರ 5ರಿಂದ 10 ರೂಗಳು ಕನಿಷ್ಠ ಮೊತ್ತದಲ್ಲಿ ಏರಿಕೆ ಏರಿಕೆ ಮಾಡಲಾಗಿದೆ, ಆದರೆ ನಮ್ಮ ಮೆಟ್ರೋ ದರ ಮಾತ್ರ ಇವೆಲ್ಲಕ್ಕಿಂತ ಬಾರಿ ದುಬಾರಿಯಾಗಿದೆ ಎಂದು ಜನ ಆಡಳಿತ ಮತ್ತು ವಿರೋಧ ಪಕ್ಷಗಳು ಎರಡು ಕಾರಣ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಾಸ್ ಗಳ ಮೊದಲಿನ ದರ
ಒಂದು ದಿನಕ್ಕೆ 150
ಮೂರು ದಿನಕ್ಕೆ 350
ಐದು ದಿನಕ್ಕೆ 550
ಪರಿಷ್ಕೃತ ದರ
ಒಂದು ದಿನಕ್ಕೆ 300
ಮೂರು ದಿನಕ್ಕೆ 600
ಐದು ದಿನಕ್ಕೆ 800