ನವದೆಹಲಿ : ರಾಜ್ಯಸಭೆಯಲ್ಲಿ ಇಂದು ‘ವಕ್ಫ್ ಜಂಟಿ ಸಂಸದೀಯ ಸಮಿತಿ’ ವರದಿ ಮಂಡನೆ ಮಾಡಲಾಯಿತು.
ಹೌದು, 2024 ರ ವಕ್ಫ್ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿಯ ವರದಿಯನ್ನು ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಈ ಹಿನ್ನೆಲೆ ವಿಪಕ್ಞಗಳು ತೀವ್ರ ಗದ್ದಲ ಮಾಡಿದ್ದು, ಸ್ಪೀಕರ್ ಕಲಾಪವನ್ನು ಕೆಲಹೊತ್ತು ಮುಂದೂಡಿದರು.
ವಕ್ಫ್ (ತಿದ್ದುಪಡಿ) ಮಸೂದೆಯ ಮೇಲಿನ ಜೆಪಿಸಿ ಜನವರಿ 29 ರಂದು ಕರಡು ವರದಿ ಮತ್ತು ತಿದ್ದುಪಡಿ ಮಾಡಿದ ಪರಿಷ್ಕೃತ ಮಸೂದೆಯನ್ನು ಅಂಗೀಕರಿಸಿತು. ಈ ಹಿಂದೆ 14 ಷರತ್ತುಗಳು ಮತ್ತು ವಿಭಾಗಗಳಲ್ಲಿ 25 ತಿದ್ದುಪಡಿಗಳೊಂದಿಗೆ ವಕ್ಫ್ ಮಸೂದೆಯನ್ನು ಅಂಗೀಕರಿಸಿತ್ತು.