![](https://kannadadunia.com/wp-content/uploads/2023/01/death-news1662787866.jpg)
ಹಾಸನ: ಜಾನುವಾರುಗಳನ್ನು ಹುಡುಕಲು ಹೋಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬೆಳ್ಳಾವರದ ಕನಕಗುಪ್ಪೆ ಗ್ರಾಮದಲ್ಲಿ ನಡೆದಿದೆ.
ದ್ಯಾವಮ್ಮ (60) ಮೃತ ಮಹಿಳೆ. ಬೆಳಿಗ್ಗೆ ಜಾನುವಾರುಗಳನ್ನು ಹುಡುಕಲೆಂದು ಹೋಗಿದ್ದವರು ಮನೆಗೆ ವಾಪಾಸ್ ಆಗಿಲ್ಲ. ಪೊದೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ದಾಡಾನೆ ದಾಳಿಯಿಂದ ಮಹಿಳೆ ಸವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.