ನವದೆಹಲಿ: ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಹೊಸದಾಗಿ ನೇಮಕಗೊಂಡ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಭಾರತ-ಯುಎಸ್ಎ ಸ್ನೇಹದ ಬಗ್ಗೆ ಚರ್ಚಿಸಿದರು.
ಪ್ರಧಾನಿ ಮೋದಿ ಅಮೆರಿಕ ಪ್ರವಾಸದಲ್ಲಿದ್ದು, ಅವರು ಹೊಸದಾಗಿ ಆಯ್ಕೆಯಾದ ಯುಎಸ್ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರನ್ನು ಭೇಟಿಯಾಗಿದ್ದಾರೆ.
ತುಳಸಿ ಗಬ್ಬಾರ್ಡ್ ಅವರೊಂದಿಗಿನ ಭೇಟಿಯ ಫೋಟೊವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ ತುಳಸಿಒ ಅವರೋಂದಿಗೆ ಭಾರತ ಮತ್ತು ಯುಎಸ್ ಸ್ನೇಹದ ಬಗ್ಗೆ ಚರ್ಚಿಸಿದ್ದಾರೆ. ಟ್ರಂಪ್ ಅವರ ರಾಷ್ಟ್ರೀಯ ಗುಪ್ತರಚರ ನಿರ್ದೇಶಕಿಯಾಗಿ ನೇಮಕಗೊಂಡಿದ್ದಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ.
ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಮೋದಿ ಅವರನ್ನು ಭಾರತೀಯ ಅನಿವಾಸಿಗಳ ಬೃಹತ್ ಜನಸಮೂಹ ಸ್ವಾಗತಿಸಿ ಅವರಿಗೆ ಕೃತಜ್ಞತೆ ಸ್ವಾಗತಿಸಿದ್ದು,ಚಳಿಗಾಲದ ಚಳಿಯಲ್ಲಿ ಬೆಚ್ಚಗಿನ ಸ್ವಾಗತ ಶೀತ ಹವಾಮಾನದ ಹೊರತಾಗಿಯೂ, ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ವಲಸಿಗರು ನನ್ನನ್ನು ವಿಶೇಷ ಸ್ವಾಗತದೊಂದಿಗೆ ಬರಮಾಡಿಕೊಂಡಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು ಎಂದು ಮೋದಿ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
“ವಾಷಿಂಗ್ಟನ್ ಡಿಸಿಯಲ್ಲಿ @TulsiGabbard ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕರನ್ನು ಭೇಟಿಯಾದೆ. ಅವರನ್ನು ಅಭಿನಂದಿಸಿದೆ. ಭಾರತ-ಯುಎಸ್ಎ ಸ್ನೇಹದ ಬಗ್ಗೆ ಚರ್ಚಿಸಿದ್ದೇವೆ. ಅವುಗಳಲ್ಲಿ ಅವರು ಯಾವಾಗಲೂ ಬಲವಾದ ಪ್ರತಿಪಾದಕರಾಗಿದ್ದಾರೆ” ಎಂದು ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಯೋತ್ಪಾದನೆ ನಿಗ್ರಹ, ಸೈಬರ್ ಭದ್ರತೆ ಮತ್ತು ಉದಯೋನ್ಮುಖ ಬೆದರಿಕೆಗಳಲ್ಲಿ ಗುಪ್ತಚರ ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
Met USA’s Director of National Intelligence, @TulsiGabbard in Washington DC. Congratulated her on her confirmation. Discussed various aspects of the India-USA friendship, of which she’s always been a strong votary. pic.twitter.com/w2bhsh8CKF
— Narendra Modi (@narendramodi) February 13, 2025