ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ ಹಿನ್ನೆಲೆ ಪ್ರಯಾಣಿಕರು ‘ನಮ್ಮ ಮೆಟ್ರೋ’ ಗೆ ಸೆಡ್ಡು ಹೊಡೆದಿದ್ದಾರೆ, ದರ ಏರಿಕೆಯಿಂದ ಆಕ್ರೋಶಗೊಂಡಿರುವ ಪ್ರಯಾಣಿಕರು ಮೆಟ್ರೋದ ಕಡೆಗೆ ಸುಳಿಯುವುದನ್ನು ಕಡಿಮೆ ಮಾಡಿದ್ದಾರೆ. ಮೆಟ್ರೋ ಗೆ ನೀಡುವ ಹಣಕ್ಕಿಂತ ಆಟೋ ಬೈಕ್ ಉತ್ತಮ ಎನ್ನುತ್ತಿದ್ದಾರೆ. ಪ್ರತಿದಿನ ಮೆಟ್ರೋದಲ್ಲಿ 8 ಲಕ್ಷದಿಂದ 9 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು ಆದರೆ ಇದೀಗ ದರ ಏರಿಕೆ ಆದಮೇಲೆ ಪ್ರಯಾಣಿಕರ ಸಂಖ್ಯೆ 35%ರಿಂದ 40% ರಷ್ಟು ಕಡಿಮೆಯಾಗಿದೆ.
ಸಮಯ ಉಳಿತಾಯದಿಂದ ಮಧ್ಯಮ ವರ್ಗ ಜನರು ಕೆಲಸಕ್ಕೆ ಹೋಗಲು ಕಾರು ಬೈಕು ಬಿಟ್ಟು ನಮ್ಮ ಮೆಟ್ರೋನ್ನ ಅವಲಂಬಿಸಿದ್ದರು. ಆದರೆ ಟಿಕೆಟ್ ದರ ಏರಿಕೆಯಿಂದಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಜನರ ಸಂಖ್ಯೆ ಕುಂಠಿತವಾಗುತ್ತಿದ್ದಂತೆ ಸಹಜವಾಗಿಯೇ ಕಲೆಕ್ಷನ್ ಸಹ ಕಡಿಮೆಯಾಗಿದೆ. ದರ ಏರಿಕೆ ಮಾಡುವ ಮೊದಲು ಒಂದು ದಿನಕ್ಕೆ 2 ಕೋಟಿ ಯಿಂದ 2.5 ಕೋಟಿ ರೂಪಾಯಿ ಆದಾಯ ಬರುತ್ತಿತ್ತು.ದರ ಏರಿಕೆ ಬಳಿಕ ಒಂದುವರೆಯಿಂದ ಎರಡು ಕೋಟಿ ವರೆಗೆ ಮಾತ್ರ ಕಲೆಕ್ಷನ್ ಆಗುತ್ತಿದೆ.
ಪ್ರತಿದಿನ ಮೆಟ್ರೋದಲ್ಲಿ 8 ರಿಂದ 9 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು ಆದರೆ ದರ ಏರಿಕೆಯಾದ ಮೇಲೆ ಪ್ರತಿದಿನ 6 ರಿಂದ 7 ಲಕ್ಷ ಪ್ರಯಾಣಿಕರು ಮಾತ್ರ ಸಂಚಾರ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರದಿಂದ ಬೆಂಗಳೂರಿನ ಮೆಟ್ರೋ ಪ್ರಯಾಣಿಕರು ಮೆಟ್ರೋ ಬಿಟ್ಟು ತಮ್ಮ ಸ್ವಂತ ಕಾರು ಬೈಕ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ನಾಲ್ಕು ದಿನದಿಂದ ನಗರದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.