![](https://kannadadunia.com/wp-content/uploads/2023/05/istockphoto-1400236810-612x612-1.jpg)
ಗದಗ: ಗದಗ-ಬೆಟಗೇರಿ ಬಡ್ಡಿ ದಂದೆಕೋರರ ಮನೆ ಮೇಲೆ ಪೊಲೀಸ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಡ್ಡಿ ದಂಧೆಕೋರನ ಮನೆಯಲ್ಲಿ ಬರೋಬ್ಬರಿ 4.90 ಕೋಟಿ ಹಣ ಪತ್ತೆಯಾಗಿದೆ.
ಯಲ್ಲಪ್ಪ ಮಿಸ್ಕಿನ್ ಎಂಬಾತನ ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು ಹಣ, ಚಿನ್ನ ಪತ್ತೆಯಾಗಿದೆ. ಈ ಬಗ್ಗೆ ಗದಗ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾಹಿತಿ ನೀಡಿದ್ದಾರೆ.
ಎರಡು ದಿನಗಳಿಂದ ಗದಗ-ಬೆಟಗೇರಿಯ 13 ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಯಲ್ಲಪ್ಪ ಮಿಸ್ಕಿನ್ ಮನೆಯಲ್ಲಿ 4.90 ಕೋಟಿ ಹಣ, 992 ಗ್ರಾಂ ಚಿನ್ನ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. 650 ಬಾಂಡ್, 4 ಬ್ಯಾಂಕ್ ಎಟಿಎಂ, 9 ಪಾಸ್ ಬುಕ್, ಎರಡು ಎಲ್ ಐಸಿ ಬಾಂಡ್ ಗಳನ್ನು ಜಪ್ತಿ ಮಾಡಲಾಗಿದೆ.
ಅಲ್ಲದೇ ಅಕ್ರಮವಾಗಿ ಸಂಗ್ರಹಿಸಿದ್ದ 65 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಯಲ್ಲಪ್ಪ ಮಿಸ್ಕಿನ್ ಸೇರಿ ಐವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.